ರಫೇಲ್​​​​ಗೆ ಆ​ಯುಧ ಪೂಜೆ ವಿರೋಧಿಸಿದವರ ವಿರುದ್ಧ ರಾಜನಾಥ್ ಸಿಂಗ್ ಕೆಂಡ

ಶಸ್ತ್ರಪೂಜೆ ವಿರುದ್ಧ ಮಾತನಾಡುವ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೆಂಡಕಾರಿದ್ದಾರೆ. ಹರಿಯಾಣದ ಕರ್ನೂಲ್​​ನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಫೇಲ್ ವಿಮಾನ ಆಗಮನದಿಂದ ಭಾರತದ ಶಕ್ತಿ ಹೆಚ್ಚಾಗುತ್ತಿದೆ. ಆದ್ರೆ ಅದನ್ನು ಬಳಸುವ ಮುನ್ನ ನಾವು  ಪೂಜೆ ಮಾಡಬೇಕು. ಹೀಗಾಗಿ ನಾನು ವಿಮಾನದ ಮೇಲೆ ಓಂ ಎಂದು ಬರೆದೆ. ಆದ್ರೆ ಕಾಂಗ್ರೆಸ್ ನಾಯಕರು ಅದನ್ನೂ ವಿವಾದ ಮಾಡಿಬಿಟ್ಟರು. ನೀವು ಓಂ ಗೆ ಆಕ್ಷೇಪ ವ್ಯಕ್ತಪಡಿಸುತ್ತೀರಿ. ಯಾಕೆ ನೀವು ನಿಮ್ಮ ಮನೆಯಲ್ಲಿ ಓಂ ಹೇಳೋದು, ಬರೆಯೋದು ಮಾಡಲ್ವಾ..? ಕ್ರಿಶ್ಚಿಯನ್ನರು ಆಮೆನ್ ಹೇಳುವುದಿಲ್ಲವಾ..? ಮುಸ್ಲಿಮರು ಅಮೀನ್ ಎಂದು ಹೇಳುವುದಿಲ್ವಾ..?  ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್​ನವರು ಟೀಕೆಯ ಮೂಲಕವೇ ರಫೇಲನ್ನು ಸ್ವಾಗತಿಸುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರು ಪಾಕಿಸ್ತಾನವನ್ನು ಬಲಪಡಿಸುತ್ತಿದ್ದಾರೆ ಅಂದ್ರು.

ಅಕ್ಟೋಬರ್ 8ರಂದು ದಸರಾ ದಿನ 36 ರಫೇಲ್​ಗಳ ಪೈಕಿ ಒಂದನ್ನು ಭಾರತಕ್ಕೆ ಸಾಂಕೇತಿಕವಾಗಿ ಹಸ್ತಾಂತರಿಸಲಾಗಿತ್ತು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್​​ ವಿಮಾನದ ಮೇಲೆ ಓಂ ಬರೆದು, ಚಕ್ರಕ್ಕೆ ನಿಂಬೆ ಹಣ್ಣು ಇಟ್ಟು ಆಯುಧ ಪೂಜೆ ನೆರವೇರಿಸಿದ್ದರು.

Contact Us for Advertisement

Leave a Reply