ಅರ್ನಾಬ್ ಗೋಸ್ವಾಮಿ ಬಂಧಿಸುವಂತಿಲ್ಲ! 3 ವಾರ ಸುಪ್ರೀಂಕೋರ್ಟ್ ರಕ್ಷಣೆ!

masthmagaa.com:

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಮೂರು ವಾರಗಳ ಕಾಲ ಬಂಧನದಿಂದ ಸುಪ್ರೀಂಕೋರ್ಟ್ ರಕ್ಷಣೆ ನೀಡಿದೆ.‌ ಮಹಾರಾಷ್ಟ್ರದ ಪಾಲಘರ್ ಸಾಧುಗಳ ಹತ್ಯೆಗೆ ಸಂಬಂಧಪಟ್ಟ ಹಾಗೆ ನ್ಯೂಸ್ ಶೋ ನಡೆಸಿಕೊಡುತ್ತಾ ಅರ್ನಾಬ್ ಗೋಸ್ವಾಮಿ ರೊಚ್ಚಿಗೆದ್ದಿದ್ದರು. ಅನ್ಯಧರ್ಮೀಯರ ಮೇಲೆ ದಾಳಿಯಾದಾಗ ಧ್ವನಿಯೆತ್ತುವ ಸೋನಿಯಾ ಗಾಂಧಿ ಈಗ ಹಿಂದೂ ಸಾಧುಗಳ ಹತ್ಯೆಯಾದಾಗ ಯಾಕೆ ಮೌನವಹಿಸಿದ್ದಾರೆ ಅಂತ ಅಬ್ಬರಿಸಿದ್ದರು. ಒಂದು ಹಂತದಲ್ಲಿ, ಸಾಧುಗಳ ಹತ್ಯೆಗೆ ಇಟಲಿಯ ಅಂತೋನಿಯೋ ಮೈನೋ ಅಲಿಯಾಸ್ ಸೋನಿಯಾಗಾಂಧಿಯೇ ಹೊಣೆ ಎನ್ನುವ ಅರ್ಥದಲ್ಲಿ ಮಾತನಾಡಿಬಿಟ್ಟಿದ್ದರು.

ಇದಾದ ಬಳಿಕ ಅರ್ನಾಬ್ ಗೋಸ್ವಾಮಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಎಂದು ಆರೋಪಿಸಲಾಗುತ್ತಿರುವ ಇಬ್ಬರು ದುಷ್ಕರ್ಮಿಗಳು ಬೈಕಲ್ಲಿ ಬಂದು ದಾಳಿ ಮಾಡಿದ್ದರು. ಇದಕ್ಕೆ ಸಂಬಂಧಪಟ್ಟ ಹಾಗೆ ಅರ್ನಾಬ್ ಗೋಸ್ವಾಮಿ ದೂರು ಕೊಟ್ಟ ಬಳಿಕ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಈ ನಡುವೆ ಅರ್ನಾಬ್ ಗೋಸ್ವಾಮಿ ವಿರುದ್ಧವೂ ಹೆಚ್ಚಾಗಿ ಮಹಾರಾಷ್ಟ್ರದಲ್ಲಿ ಸೇರಿದಂತೆ, ದೇಶದ ವಿವಿಧ ಭಾಗಗಳಲ್ಲಿ ಇನ್ನೂರಕ್ಕೂ ಅಧಿಕ ಎಫ್ಐಆರ್ ದಾಖಲಾಗಿದೆ. ಬಹುತೇಕ ಪ್ರಕರಣಗಳನ್ನು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ದಾಖಲಿಸಿದ್ದಾರೆ. ಇದರಲ್ಲಿ ಸೋನಿಯಾಗಾಂಧಿಗೆ ಅವಮಾನ ಮಾಡಿದ ಆರೋಪ ಮಾಡಲಾಗಿದೆ. ಹೀಗಾಗಿ ಅರ್ನಾಬ್ ಗೋಸ್ವಾಮಿ ರಕ್ಷಣೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈಗ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಕೊಟ್ಟಿದ್ದು, ಮೂರು ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಿದೆ. ಇದರ ಪರಿಣಾಮ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾಗಿರುವ ಇನ್ನೂರಕ್ಕೂ ಅಧಿಕ FIR ಸಂಬಂಧ ಅವರನ್ನು ಬಂಧಿಸುವಂತಿಲ್ಲ. ಈ ರಕ್ಷಣೆ 3 ವಾರಗಳ ಕಾಲ ಇರುತ್ತದೆ. ಈ ಅವಧಿಯಲ್ಲಿ ಅರ್ನಾಬ್ ಗೋಸ್ವಾಮಿ ನಿರೀಕ್ಷಣಾ ಜಾಮೀನು ಪಡೆಯಲು ಕಾಲ್ ಅವಕಾಶ ಸಿಕ್ಕಂತಾಗಿದೆ.

-masthmagaa.com

Contact Us for Advertisement

Leave a Reply