ಸ್ವಿಂಗ್ ಮಾಂತ್ರಿಕ ಇರ್ಫಾನ್ ಪಠಾಣ್ ಅಂತಾರಾಷ್ಟ್ರೀಯ ಕ್ರಿಕೆಟ್​​​ಗೆ ವಿದಾಯ

ಟೀಂ ಇಂಡಿಯಾದ ಸ್ವಿಂಗ್​ ಕಿಂಗ್​​ ಇರ್ಫಾನ್ ಪಠಾಣ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್​​ ಸರಣಿ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಇರ್ಫಾನ್ ಪಠಾಣ್ 29 ಟೆಸ್ಟ್, 120 ಏಕದಿನ ಹಾಗೂ 24 ಟಿ 20 ಪಂದ್ಯಗಳನ್ನು ಆಡಿದ್ದಾರೆ. ವೃತ್ತಿ ಜೀವನದಲ್ಲಿ ಒಟ್ಟು 301 ವಿಕೆಟ್​ಗಳನ್ನ ಗಳಿಸಿದ್ದಾರೆ. ಇನ್ನು 29 ಟೆಸ್ಟ್​​ ಪಂದ್ಯಗಳಿಂದ 100 ವಿಕೆಟ್​, 1 ಶತಕ ಹಾಗೂ 6 ಅರ್ಧಶತಕ ಸೇರಿ 1105 ರನ್​, 120 ಏಕದಿನ ಪಂದ್ಯಗಳಿಂದ 173 ವಿಕೆಟ್​​​, 5 ಅರ್ಧಶತಕ ಸೇರಿ 1544 ರನ್​ ಹಾಗೂ 24 ಟಿ-20 ಪಂದ್ಯಗಳಿಂದ 28 ವಿಕೆಟ್​​ ಮತ್ತು 172ರನ್​ ಗಳಿಸಿದ್ದಾರೆ. 2012ರ ಟಿ-20 ಕ್ರಿಕೆಟ್​​ ವಿಶ್ವಕಪ್​​ನಲ್ಲಿ ಕೊನೆಯದಾಗಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಐಪಿಎಲ್ ನಲ್ಲಿ ಪಂಜಾಬ್​, ಡೆಲ್ಲಿ, ಪುಣೆ, ಹೈದರಾಬಾದ್​ ಹಾಗೂ ಗುಜರಾತ್​ ತಂಡದ ಪರ ಆಟವಾಡಿದ್ದು, ತಮ್ಮದೇ ಛಾಪು ಮೂಡಿಸಿದ್ದರು.

Contact Us for Advertisement

Leave a Reply