masthmagaa.com:

ಬೆಂಗಳೂರು: ಕೊರೋನಾ ವೈರಸ್ ದಾಳಿಗೆ ಸುಲಭವಾಗಿ ಒಳಗಾಗುವ ತೀವ್ರ ಶ್ವಾಶಕೋಶದ ರೋಗ ಲಕ್ಷಣಗಳಿರುವ ಕೆಲ ವರ್ಗಗಳನ್ನ ರಾಜ್ಯ ಆರೋಗ್ಯ ಇಲಾಖೆ ಗುರುತಿಸಿದೆ. ಅಂಥವರಿಗೆ ತುರ್ತಾಗಿ ಕೊರೋನಾ ಪರೀಕ್ಷೆ ನಡೆಸಲಾಗುವುದು ಅಂತ ಪ್ರಕಟಣೆ ಹೊರಡಿಸಲಾಗಿದೆ.

ಗರ್ಭಿಣಿಯರು, ಎದೆ ಹಾಲುಣಿಸುವ ತಾಯಂದಿರು, ಹೆಚ್​ಐವಿ ರೋಗಿಗಳು, ಟಿಬಿ ರೋಗಿಗಳು, ಡಯಾಲಿಸಿಸ್ ರೋಗಿಗಳು, ಅಂಗ ಕಸಿ ಮಾಡಿಸಿದ ರೋಗಿಗಳು, ಕ್ಯಾನ್ಸರ್ ರೋಗಿಗಳು ಹಾಗೂ ಪಾರ್ಶ್ವವಾಯು ರೋಗಿಗಳು ಕೊರೋನಾ ವೈರಸ್ ದಾಳಿಗೆ ಸುಲಭವಾಗಿ ಒಳಗಾಗುವ ಸಾಧ್ಯತೆ ಇರುತ್ತದೆ.

ಹೀಗಾಗಿ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಎಲ್ಲಾ ಜಿಲ್ಲೆಗಳಲ್ಲೂ ಈ ವರ್ಗದ ಜನರ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಈ ಪೈಕಿ ಯಾರಲ್ಲಿ ರೋಗ ಲಕ್ಷಣ ಕಾಣಿಸುತ್ತದೆಯೋ ಅಂಥವರನ್ನ ಕಡ್ಡಾಯವಾಗಿ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಮೂಲಕ ಆರಂಭಿಕ ಹಂತದಲ್ಲೇ ಸೋಂಕಿತರನ್ನ ಗುರುತಿಸಿ ಕಾಯಿಲೆ ಹರಡದಂತೆ ತಡೆಯಲಾಗುವುದು ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

-masthmagaa.com

Contact Us for Advertisement

Leave a Reply