ಚೀನಾದಲ್ಲಿ ಭಾರತದ ರೂಪಾಂತರಿ ವೈರಸ್ ಹಾವಳಿ.. ಹಲವೆಡೆ ಲಾಕ್​ಡೌನ್!

masthmagaa.com:

ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 24 ಕೊರೋನಾ ಕೇಸಸ್ ವರದಿಯಾಗಿದೆ. ಇದರಲ್ಲಿ 14 ಕೇಸ್​ ವಿದೇಶದಿಂದ ಬಂದವರಾಗಿದ್ರೆ, ಉಳಿದ 10 ಕೇಸ್ ಗೌಂಗ್​ಡಾಂಗ್ ಪ್ರಾಂತ್ಯದಲ್ಲಿ ವರದಿಯಾಗಿದೆ. ಕಳೆದ ಕೆಲ ದಿನಗಳಿಂದ ಗೌಂಗ್​ಡಾಂಗ್ ಪ್ರಾಂತ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗ್ತಿದೆ. ಹೆಚ್ಚೆಚ್ಚು ಅಂದ್ರೆ 20, 25 ಹೀಗೆ.. ಅವರಿಗೆ ಇದೇ ಹೆಚ್ಚು. ಹೀಗಾಗಿ ಗೌಂಗ್​ಡಾಂಗ್ ಪ್ರಾಂತ್ಯದ ಗೌಂಗ್​ಝೌ ಮತ್ತು ಫೋಷನ್ ನಗರಗಳಲ್ಲಿ ಲಾಕ್​ಡೌನ್​ ರೀತಿಯ ನಿರ್ಬಂಧಗಳನ್ನ ಜಾರಿಗೆ ತರಲಾಗಿದೆ. ಜನರು ಮನೆಯಿಂದ ಹೊರಬರದಂತೆ, ಹೊರ ಹೋಗಲೇಬೇಕು ಅನ್ನೋರು ಕೊರೋನಾ ನೆಗೆಟಿವ್ ರಿಪೋರ್ಟ್ ತೋರಿಸುವಂತೆ ಆದೇಶಿಸಲಾಗಿದೆ. ಗೌಂಗ್​ಝೌ ನಗರದಲ್ಲಿ ಕಳೆದ 10 ದಿನಗಳಲ್ಲಿ 41 ಕೇಸ್ ವರದಿಯಾಗಿದೆ. ಇಲ್ಲಿ ಕೊರೋನಾ ಕೇಸಸ್ ಹೆಚ್ಚಾಗಿರೋದಕ್ಕೆ ಭಾರತದಲ್ಲಿ ಮೊದಲು ಕಾಣಿಸಿಕೊಂಡ ರೂಪಾಂತರಿ ವೈರಾಣು ಕಾರಣ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಭಾರತದ ರೂಪಾಂತರಿ ವೈರಾಣು ಚೀನಾದಲ್ಲಿ ಕಾಣಿಸಿಕೊಂಡಿದ್ದು ಹೇಗೆ, ಅದರ ಮೂಲ ಯಾವ್ದು ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply