ವಿಮಾನದಲ್ಲಿ ಹೋಗುವವರು ಯಾವ ರೀತಿ ಬಟ್ಟೆ ಧರಿಸಬೇಕು ಗೊತ್ತಾ..?

ಎಷ್ಟೋ ಜನ ವಿಮಾನಗಳಲ್ಲಿ ಪ್ರಯಾಣಿಸಿರುತ್ತೀರಿ, ಇನ್ನು ಕೆಲವರು ಮುಂದೊಂದು ದಿನ ಪ್ರಯಾಣಿಸಬೇಕಾದ ಸಂದರ್ಭ ಬರಬಹುದು. ಆದ್ರೆ ವಿಮಾನದಲ್ಲಿ ಹೋಗುವಾಗ ಯಾವ ರೀತಿಯ ಬಟ್ಟೆ ಧರಿಸಬೇಕು ಅನ್ನೋದು ಎಷ್ಟೋ ಜನಕ್ಕೆ ಗೊತ್ತಿರಲ್ಲ. ಹೀಗಾಗಿ ವಿಮಾನದಲ್ಲಿ ಯಾವ ರೀತಿ ಬಟ್ಟೆ ಧರಿಸಿದ್ರೆ ಒಳ್ಳೆಯದು, ಯಾವ ಬಟ್ಟೆ ಧರಿಸಿದ್ರೆ ಏನಾಗುತ್ತೆ ಅಂತ ನಾವು ಹೇಳ್ತೀವಿ ನೋಡಿ…

ಟೈಟ್ ಬಟ್ಟೆಗಳನ್ನು ಧರಿಸಬೇಡಿ
ವಿಮಾನದಲ್ಲಿ ಪ್ರಯಾಣಿಸುವಾಗ ಮನುಷ್ಯನ ದೇಹವು ಸ್ವಾಭಾವಿಕವಾಗಿ ಊದಿಕೊಳ್ಳುತ್ತೆ. ಹೀಗಾಗಿ ಬಿಗಿಯಾದ ಸ್ಕರ್ಟ್, ಬ್ಲೌಸ್ ಹಾಗೂ ಶರ್ಟ್ ಗಳನ್ನ ಧರಿಸಬಾರದು. ಅಲ್ಲದೆ ಸಡಿಲವಾದ ಬಟ್ಟೆಯನ್ನು ಧರಿಸುವುದರಿಂದ ವಿಮಾನದೊಳಗೆ ಆರಾಮಾಗಿ ಓಡಾಡಲು, ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತೆ. ಹೀಗಾಗಿ ಎಲಾಸ್ಟಿಕ್ ಬಟ್ಟೆ ಅಥವಾ ಲಗ್ಗಿನ್ಸ್ ಗಳನ್ನು ಧರಿಸುವುದು ಉತ್ತಮ.

ಆಭರಣ ಮತ್ತು ಬೃಹತ್ ವಸ್ತುಗಳು
ಫ್ರೆಂಡ್ಸ್ ನೀವು ಫ್ಲೈಟ್ ನಲ್ಲಿ ಪ್ರಯಾಣಿಸುವುದಾದರೆ ಮೆಟಲ್ ವಸ್ತು ಹಾಗೂ ಆಭರಣಗಳನ್ನು ಅವಾಯ್ಡ್ ಮಾಡಿ. ಅದರಲ್ಲೂ ಯಾವ ಆಭರಣಗಳನ್ನ ಬಿಚ್ಚಲು ಕಷ್ಟವಾಗುತ್ತೋ ಅವುಗಳನ್ನ ಧರಿಸಲೇಬೇಡಿ. ಅವುಗಳಿಂದ ಮೆಟಲ್ ಚೆಕಿಂಗ್ ವೇಳೆ ತಡವಾಗಬಹುದು. ಅಲ್ಲದೆ ಲೋಹದ ದೊಡ್ಡ ದೊಡ್ಡ ಆಭರಣ ಹಾಗೂ ವೆಪನ್ ರೀತಿಯ ಆಭರಣಗಳಿಂದಲೂ ಸೆಕ್ಯೂರಿಟಿ ಸಮಸ್ಯೆ ಎದುರಿಬೇಕಾಗುತ್ತದೆ. ಹೀಗಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಅನಗತ್ಯ ಆಭರಣಗಳನ್ನ ತೊಡಬೇಡಿ. ಒಂದು ವೇಳೆ ನೀವು ಹೆಚ್ಚು ಆಭರಣಗಳನ್ನ ತೊಟ್ಟಿದ್ದರೆ ಅವುಗಳನ್ನ ಲಗೇಜ್ ಅಥವಾ ಕ್ಯಾರಿಬ್ಯಾಗ್ ನಲ್ಲಿ ಇಡಿ.

ಶಾಟ್ಸ್, ಚಡ್ಡಿಗಳನ್ನು ಧರಿಸಬೇಡಿ
ಫ್ರೆಂಡ್ಸ್ ಹವಾನಿಯಂತ್ರಿತ ವಿಮಾನದಲ್ಲಿ ಪ್ರಯಾಣಿಸುವಾಗ ಶಾಟ್ಸ್, ಚಡ್ಡಿ ಮುಂತಾದ ಅರೆಬರೆ ಬಟ್ಟೆಗಳನ್ನ ಧರಿಸಿದರೆ ನಿಮಗೆ ಚಳಿ ಆಗಬಹುದು.ಅಲ್ಲದೆ ಇದು ಕೆಲವೊಂದು ದೇಶ ಹಾಗೂ ಅಲ್ಲಿನ ಸಂಸ್ಕೃತಿಗೆ ವಿರುದ್ದವಾಗಿ ಇರಬಹುದು. ಅಲ್ಲದೇ ವಿಮಾನದಲ್ಲಿ ಬೆಂಕಿ ಅವುಗಳ ಸಂಭವಿಸಿ ಪ್ರಯಾಣಿಕರನ್ನು ಸ್ಥಳಾಂತರಿಸುವಾಗ ಮೈತುಂಬಾ ಬಟ್ಟೆ ಇದ್ದರೆ ಒಳ್ಳೆಯದು. ವಿಮಾನ ಟೇಕಾಫ್ ಆಗುವ ಮುನ್ನ ಹಾಗೂ ತದನಂತರದ ತಾಪಮಾನದಲ್ಲಿ ತುಂಬಾ ವ್ಯತ್ಯಾಸವಿರುತ್ತದೆ.

ಪರ್ಫ್ಯೂಮ್, ಸೆಂಟ್‌ಗಳನ್ನು ಬಳಸಬೇಡಿ
ಫ್ರೆಂಡ್ಸ್ ವಿಮಾನ ಹತ್ತುವ ಮುನ್ನ ಪರ್ಫ್ಯೂಮ್, ಸೆಂಟ್ ಅಥವಾ ಡಿಯೋಗಳನ್ನು ಬಳಸಬೇಡಿ. ಏಕೆಂದರೆ ಇವುಗಳು ಸಹಪ್ರಯಾಣಿಕರಿಗೆ ಟಾರ್ಚರ್ ಅನಿಸಬಹುದು. ಅಲ್ಲದೇ ಇದರಿಂದ ಅಲರ್ಜಿ ಅಥವಾ ಅಸ್ತಮಾ ಕೂಡ ಬಣ್ಣಿಸಬಹುದು. ಹೀಗಾಗಿ ನಿಮ್ಮ ಸಹಪ್ರಯಾಣಿಕರ ಬಗೆಯೂ ಗಮನವಿರಲಿ.

ಹೈ ಹೀಲ್ಸ್, ಫ್ಲಿಪ್ ಫ್ಲಾಪ್ಸ್, ಸ್ಲೈಡ್ಸ್
ವಿಮಾನದಲ್ಲಿ ಪ್ರಯಾಣಿಸುವಾಗ ಯಾವ ರೀತಿ ಪಾದರಕ್ಷೆಯನ್ನು ಧರಿಸಬೇಕು ಅಂತ ಹೇಳುವುದು ತುಂಬಾ ಕಷ್ಟ. ಯಾಕಂದ್ರೆ ಹೈ ಹೀಲ್ಸ್ ಧರಿಸಿದರೆ ಫಾಸ್ಟಾಗಿ ನಡೆಯಲು ಸಾಧ್ಯವಾಗಲ್ಲ. ಅಲ್ಲದೆ ಕೆಲ ಸಂದರ್ಭಗಳಲ್ಲಿ ನಿಮ್ಮನ್ನ ಸ್ಥಳಾಂತರಿಸುವಾಗ ಸಮಸ್ಯೆ ಉಂಟಾಗಬಹುದು. ಇನ್ನು ಎಮರ್ಜೆನ್ಸಿ ಸಮಯದಲ್ಲಿ ಫ್ಲಿಪ್ ಫ್ಲಾಪ್ ಹಾಗೂ ಸ್ಲೈಡ್ ಗಳು ನಿಮ್ಮ ಕಾಲಿನಿಂದ ಜಾರಿ ಹೋಗಬಹುದು.

ಬೇಗ ಸುಡುವ ಬಟ್ಟೆಗಳು ಬೇಡ
ವಿಮಾನ ಅಪಘಾತವಾದಾಗ ಆಗುವ ಸಾವು-ನೋವು ಗಳಿಗಿಂತ.. ಅಪಘಾತದ ನಂತರ ಉಂಟಾಗುವ ಬೆಂಕಿಯಿಂದ ಆಗುವ ಸಾವು-ನೋವುಗಳು ಹೆಚ್ಚಾಗಿರುತ್ತವೆ. ಹೀಗಾಗಿ ಅತ್ಯಂತ ಬೇಗ ಸುಡುವ ಪಾಲಿಸ್ಟರ್ ಅಥವಾ ನೈಲಾನ್ ಬಟ್ಟೆಗಳನ್ನು ಬಳಸಬೇಡಿ. ಪಾಲಿಸ್ಟರ್ ಹಾಗೂ ನೈಲಾನ್ ಬಟ್ಟೆಗಳು ಗಾಳಿಯನ್ನು ಹಾದು ಹೋಗಲು ಬಿಡುವುದಿಲ್ಲ. ಇದರ ಬದಲಾಗಿ ಹತ್ತಿ, ರೇಷ್ಮೆ, ಉಣ್ಣೆ ಹಾಗೂ ಲೆನಿನ್ ಬಟ್ಟೆಗಳನ್ನು ಬಳಸಿ. ಇವು ಗಾಳಿ ಹಾಗೂ ತೇವಾಂಶವನ್ನ ಹಾದುಹೋಗಲು ಅನುವು ಮಾಡಿಕೊಡುತ್ತವೆ.

ದೊಡ್ಡ ಜಾಕೆಟ್​​ಗಳು ಬೇಡವೇ ಬೇಡ
ವಿಮಾನದಲ್ಲಿ ಪ್ರಯಾಣಿಸುವಾಗ ದೊಡ್ಡ ಗಾತ್ರದ ಜಾಕೆಟ್ ಗಳನ್ನು ಅವಾಯ್ಡ್ ಮಾಡಿ. ಇದರಿಂದ ಅವುಗಳನ್ನ ಇಡಲು ಬೇಕಾದ ಜಾಗದ ಸಮಸ್ಯೆ ಕೂಡ ಬರಲ್ಲ. ಜಾಕೆಟ್ ನ ಬದಲಾಗಿ  ಹಗುರವಾದ ಉಲ್ಲನ್ ಶಾಲ್ ಅನ್ನ ಬಳಸಿ. ಅದನ್ನ ಬೆಸೀಟ್ ಆಗಿ ಬಳಸಬಹುದು. ಜೊತೆಗೆ ಹೆಚ್ಚು ಜಾಗ ಕೂಡ ಅದಕ್ಕೆ ಬೇಕಾಗಿಲ್ಲ.

ಫ್ರೆಂಡ್ಸ್ ಇದಿಷ್ಟು ವಿಮಾನದಲ್ಲಿ ಪ್ರಯಾಣಿಸುವಾಗ ಧರಿಸಬೇಕಾದ ಬಟ್ಟೆಗಳು ಹಾಗೂ ನಿಮ್ಮ ಲಗ್ಗೇಜ್ ಹೇಗಿರಬೇಕು ಎಂಬುದರ ಬಗ್ಗೆ ಕೆಲವೊಂದು ಉಪಯುಕ್ತ ಮಾಹಿತಿ

Contact Us for Advertisement

Leave a Reply