181 ದೇಶಗಳಲ್ಲಿ ಕೊರೋನಾ.. 33ನೇ ಸ್ಥಾನದಲ್ಲಿ ಭಾರತ..!

masthmagaa.com:

ಮಾರಣಾಂತಿಕ ಕೊರೋನಾ ವೈರಸ್​ ಇಡೀ ಜಗತ್ತಿನಲ್ಲಿ 1 ಮಿಲಿಯನ್​ಗೂ (10 ಲಕ್ಷ) ಹೆಚ್ಚು ಜನರಿಗೆ ಹರಡಿದೆ. ಈ ಪೈಕಿ ಬರೋಬ್ಬರಿ 53,000 ಜನ ಪ್ರಾಣ ಕಳೆದುಕೊಂಡಿದ್ದು, 2 ಲಕ್ಷಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ. ಈ ಮೂಲಕ ಜಗತ್ತಿನ 181 ದೇಶಗಳಿಗೆ ಕೊರೋನಾ ಮಹಾಮಾರಿ ಕಾಲಿಟ್ಟಂತಾಗಿದೆ.

ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿರೋದು ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳೋ ಅಮೆರಿಕದಲ್ಲಿ. ಅಲ್ಲಿ ಎರಡೂವರೆ ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದೆ. ಎರಡನೇ ಸ್ಥಾನದಲ್ಲಿ ಇಟಲಿ ಇದ್ದು 1.15 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. ಮೂರನೇ ಸ್ಥಾನದಲ್ಲಿರೋ ಸ್ಪೇನ್​ಲ್ಲಿ 1.12 ಲಕ್ಷ ಜನರಿಗೆ ಸೋಂಕು ಹರಡಿದೆ. ಉಳಿದಂತೆ ಜರ್ಮನಿ ಹಾಗೂ ಚೀನಾ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ.

ಈ ಪಟ್ಟಿಯಲ್ಲಿ ಭಾರತ 33ನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಇದುವರೆಗೆ ಎರಡೂವರೆ ಸಾವಿರ ಪ್ರಕರಣಗಳು ದೃಢಪಟ್ಟಿವೆ ಅಂತ ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಹೇಳಿದೆ. ಅಲ್ಲದೆ ದೇಶದಲ್ಲಿ ಇದುವರೆಗೆ 72 ಜನ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಇನ್ನು ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಪಾಕಿಸ್ತಾನ 35ನೇ ಸ್ಥಾನದಲ್ಲಿದೆ. ಅಲ್ಲಿ 2,400 ಪ್ರಕರಣಗಳು ದೃಢಪಟ್ಟಿದ್ದು, 34 ಜನ ಮೃತಪಟ್ಟಿದ್ದಾರೆ.

ಅತಿ ಹೆಚ್ಚು ಕೊರೋನಾ ಪೀಡಿತ ದೇಶಗಳು: 

1. ಅಮೆರಿಕ
2. ಇಟಲಿ
3. ಸ್ಪೇನ್
4. ಜರ್ಮನಿ
5. ಚೀನಾ
6. ಫ್ರಾನ್ಸ್
7. ಇರಾನ್​
8. ಯುನೈಟೆಡ್ ಕಿಂಗ್​ಡಮ್
9. ಸ್ವಿಜರ್​ಲ್ಯಾಂಡ್
10. ಟರ್ಕಿ
11. ಬೆಲ್ಜಿಯಂ
12. ನೆದರ್​ಲ್ಯಾಂಡ್​
13. ಕೆನಡಾ
14. ಆಸ್ಟ್ರಿಯಾ
15. ದಕ್ಷಿಣ ಕೊರಿಯಾ
16. ಪೋರ್ಚುಗಲ್
17. ಬ್ರೆಜಿಲ್
18. ಇಸ್ರೇಲ್
19. ಸ್ವೀಡನ್
20. ನಾರ್ವೆ
21. ಆಸ್ಟ್ರೇಲಿಯಾ
22. ಝೆಕಿಯಾ
23. ಐರ್ಲ್ಯಾಂಡ್​
24. ಡೆನ್ಮಾರ್ಕ್​
25. ರಷ್ಯಾ
26. ಚಿಲಿ
27. ಈಕ್ವೆಡಾರ್
28. ಮಲೇಷ್ಯಾ
29. ಪೊಲ್ಯಾಂಡ್
30. ರೊಮೇನಿಯಾ
31. ಫಿಲಿಪ್ಪೀನ್ಸ್
32. ಜಪಾನ್
33. ಭಾರತ
34. ಲಕ್ಸಂಬರ್ಗ್​
35. ಪಾಕಿಸ್ತಾನ

masthmagaa.com

Contact Us for Advertisement

Leave a Reply