ಐದು ಮದ್ವೆಯಾದ..ಒಂದೇ ಮನೆಯಲ್ಲಿ ಇಟ್ಟ..! ಪ್ರಶ್ನಿಸಿದ್ದಕ್ಕೆ ತಲಾಖ್ ಕೊಟ್ಟ..!

ಉತ್ತರ ಪ್ರದೇಶ: ಐದೈದು ಮದುವೆಯಾಗಿ ತ್ರಿವಳಿ ತಲಾಖ್ ನೀಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್​​​​ನ ಮಂಗಳಪುರದಲ್ಲಿ ಈ ಘಟನೆ ನಡೆದಿದೆ. ವಸೀಮ್ ಅಹ್ಮದ್ ಎಂಬ ವ್ಯಕ್ತಿಯೊಬ್ಬ ಒಂದರ ನಂತರ ಒಂದು ಮದುವೆಯಾಗುತ್ತಿದ್ದ. ಮೊದಲನೇ ಪತ್ನಿ ಸಿರ್​​ಮನ್ ಅಜೀಮ್ ಎಂಬುವವರು ಇದನ್ನು ವಿರೋಧಿಸಿದಾಗ ತ್ರಿಪಲ್ ತಲಾಖ್ ನೀಡಿ ತವರಿಗೆ ಕಳುಹಿಸಿದ್ದಾನೆ.

ಆದ್ರೆ ಪತ್ನಿ ತ್ರಿಪಲ್ ತಲಾಖ್​​ಗೆ ನಿರಾಕರಿಸಿದಾಗ ಆಕೆಯ ಸಹೋದರನನ್ನು ಕೊಲೆ ಮಾಡೋ ಬೆದರಿಕೆಯೊಡ್ಡಿ, ಪೇಪರ್​​ಗೆ ಸಹಿ ಹಾಕಿಸಿದ್ದಾನೆ. ಕಳೆದ ಜೂನ್ 17ರಂದು ಸಿರ್​ಮನ್ ಅಜೀಮ್ ಸಹೋದರ ಅಬ್ಬಾಸ್ ಎದುರಲ್ಲೇ ಪತಿ ವಸೀಮ್ ತ್ರಿವಳಿ ತಲಾಖ್ ನೀಡಿದ್ದಾನೆ. ಮಹಿಳೆ 4 ವರ್ಷಗಳ ಹಿಂದೆ ವಸೀಮ್​​ನನ್ನು ಮದುವೆಯಾಗಿದ್ದರು.

ಐದೈದು ಮದುವೆಯಾಗಿದ್ದ ವಸೀಮ್, ಐವರು ಹೆಂಡತಿಯರನ್ನು ಒಂದೇ ಮನೆಯಲ್ಲಿ ಇರಿಸಿದ್ದ. ಅವರಲ್ಲಿ ಮತ್ತೋರ್ವ ಮಹಿಳೆ ಕೂಡ ದೂರು ನೀಡಿದ್ದಾರೆ. ಈಗಲೂ ನನಗೆ ತ್ರಿವಳಿ ತಲಾಖ್ ನೀಡಿದ ಬಳಿಕ ನಾಲ್ವರು ಪತ್ನಿಯರು ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Contact Us for Advertisement

Leave a Reply