ಚೀನಾವನ್ನು ಸುಮ್ಮನೆ ಬಿಡಲ್ಲ: ಡೊನಾಲ್ಡ್ ಟ್ರಂಪ್ ಆರ್ಭಟ

masthmagaa.com:

ಕೊರೋನಾ ವೈರಸ್​ಗೆ ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳೋ ಅಮೆರಿಕ ಅಕ್ಷರಶಃ ನಲುಗಿ ಹೋಗಿದೆ. ಅಮೆರಿಕ ನೆಲದಲ್ಲಿ ಇದುವರೆಗೆ 7 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 37 ಸಾವಿರ ಮಂದಿ ಬಲಿಯಾಗಿದ್ದಾರೆ. ಇದರ ನಡುವೆ ಚೀನಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಂಡಾಮಂಡಲರಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಕೊರೋನಾ ವೈರಸ್​ಗೆ ಚೀನಾವೇ ‘ಉದ್ದೇಶಪೂರ್ವಕ ಜವಾಬ್ದಾರ ಆಗಿದ್ದರೆ’ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

ಶ್ವೇತ ಭವನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಕೊರೋನಾ ವೈರಸ್ ಹುಟ್ಟುವ ಮೊದಲೇ ಅದನ್ನ ತಡೆಯಬಹುದಿತ್ತು. ಆದ್ರೆ ಚೀನಾ ಅದನ್ನು ಮಾಡಲಿಲ್ಲ. ಹೀಗಾಗಿ ಇಡೀ ಜಗತ್ತು ಇವತ್ತು ಸಮಸ್ಯೆ ಎದುರಿಸುವಂತಾಗಿದೆ. ಒಂದ್ವೇಳೆ ಇದು ಮಿಸ್ಟೇಕ್ ಆಗಿದ್ದರೆ ಪರವಾಗಿಲ್ಲ. ಆದ್ರೆ ಇದನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ್ದಾಗಿದ್ದರೆ ಖಂಡಿತವಾಗಿಯೂ ಅದರ ಪರಿಣಾಮ ನೆಟ್ಟಗಿರಲ್ಲ ಅಂತ ಟ್ರಂಪ್ ಎಚ್ಚರಿಸಿದ್ದಾರೆ.

ಆದ್ರೆ ಯಾವ ರೀತಿಯ ಪರಿಣಾಮ ಅಂತ ಅವರು ಹೇಳಿಲ್ಲ. ಅದು ಯುದ್ಧವೂ ಆಗಿರಬಹುದು.. ಆರ್ಥಿಕ ದಿಗ್ಬಂಧನವೂ ಆಗಿರಬಹುದು. ಕೊರೋನಾ ವೈರಸ್​ ಒಂದು ಜೈವಿಕ ಅಸ್ತ್ರ. ಚೀನಾದ ಪ್ರಯೋಗಾಲಯಗಳಲ್ಲಿ ಅದಕ್ಕೆ ಜನ್ಮ ನೀಡಲಾಗಿದೆ ಅನ್ನೋ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್​ ಈ ಎಚ್ಚರಿಕೆ ಕೊಟ್ಟಿದ್ದಾರೆ. ಅಮೆರಿಕ ಹಾಗೂ ಚೀನಾ ನಡುವಿನ ಕೊರೋನಾ ಯುದ್ಧ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ.

-masthmagaa.com

Contact Us for Advertisement

Leave a Reply