ಯುವಕ, ಯುವತಿಯರಿಗೆ ಕರ್ಫ್ಯೂ ಹೇರಿದ ಟರ್ಕಿ ಸರ್ಕಾರ..!

masthmagaa.com:

ಕೊರೋನಾ ವೈರಸ್ ಹರಡುವುದನ್ನ ತಡೆಗಟ್ಟುವ ಉದ್ದೇಶದಿಂದ ಟರ್ಕಿ ಸರ್ಕಾರ ಭಾಗಶಃ ಕರ್ಫ್ಯೂ ಹೇರಿದೆ. ಅಂದ್ರೆ ಕೇವಲ 20 ವರ್ಷದೊಳಗಿನವರು ಮನೆಯಿಂದ ಹೊರಬರುವಂತಿಲ್ಲ ಅಂತ ಆದೇಶ ಹೊರಡಿಸಿದೆ. ದೇಶವನ್ನುದ್ದೇಶಿಸಿ ಮಾತನಾಡಿದ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಕನ್ 20 ವರ್ಷದೊಳಗಿನ ನಾಗರಿಕರಿಗೆ ಭಾಗಶಃ ಕರ್ಫ್ಯೂ ಘೋಷಿಸಿದ್ರು.

ಕೊರೋನಾ ವಿರುದ್ಧದ ಭಾಗವಾಗಿ ಇಸ್ತಾಂಬುಲ್ ಹಾಗೂ ರಾಜಧಾನಿ ಅಂಕಾರಾ ಸೇರಿದಂತೆ 31 ಪ್ರಾಂತ್ಯಗಳಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಈ ಪ್ರಾಂತ್ಯಗಳಿಂದ ಯಾವುದೇ ವಾಹನ ಹೊರ ಹೋಗುವಂತಿಲ್ಲ, ಒಳ ಪ್ರವೇಶಿಸುವಂತಿಲ್ಲ. ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳಿಗೆ ಇದು ಅನ್ವಯವಾಗುವುದಿಲ್ಲ.

ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕಿರಾಣಿ ಅಂಗಡಿಗಳಲ್ಲಿ ಮಾಸ್ಕ್​ ಬಳಕೆಯನ್ನ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಟರ್ಕಿಯಲ್ಲಿ 65 ವರ್ಷ ಮೇಲ್ಪಟ್ಟವರು ಹಾಗೂ ದೀರ್ಘಕಾಲದ ಕಾಯಿಲೆ ಇರುವವರು ಮನೆಯಲ್ಲೇ ಇರುವಂತೆ ಆದೇಶಿಸಲಾಗಿದೆ. ಇದೀಗ 20 ವರ್ಷದೊಳಗಿನ ನಾಗರಿಕರು ಕೂಡ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.

ಕೊರೋನಾ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರೋ ಟರ್ಕಿಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಈ ಪೈಕಿ 425 ಜನ ಮೃತಪಟ್ಟಿದ್ದು, 484 ಜನ ಗುಣಮುಖರಾಗಿದ್ದಾರೆ.

-masthmagaa.com

Contact Us for Advertisement

Leave a Reply