ಲಾಕ್​ಡೌನ್​ ವೇಳೆ ನಾಯಿಗಳ ವಿಡಿಯೋ ಚಾಟಿಂಗ್..!

masthmagaa.com:

ಕೊರೋನಾ ವೈರಸ್ ಹರಡುವಿಕೆ ತಡೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ಲಾಕ್​​​ಡೌನ್ ಅನುಸರಿಸುತ್ತಿವೆ. ಭಾರತದಲ್ಲೂ ಮತ್ತೆ ಮೇ 17ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಇದರಿಂದ ಜನ ಮನೆಗಳಲ್ಲೇ ಬಂಧಿಯಾಗಿದ್ದಾರೆ. ದೂರದ ಊರುಗಳಲ್ಲಿ, ವಿದೇಶಗಳಲ್ಲಿರುವ ಕುಟುಂಬದವರು, ಸ್ನೇಹಿತರೊಂದಿಗೆ ಮಾತನಾಡಲು ವೀಡಿಯೋ ಕಾಲ್ ಬಳಸಿಕೊಳ್ತಿದ್ದಾರೆ. ಈ ರೀತಿ ಮನುಷ್ಯರು ಮಾತ್ರ ವಿಡಿಯೋ ಕಾಲ್ ಮಾಡ್ತಿಲ್ಲ. ಪ್ರಾಣಿಗಳು ಕೂಡ ಇದೇ ರೀತಿಯ ದಿನಗಳಿಗೆ ಹೊಂದಿಕೊಂಡಿವೆ. ಐರ್ಲ್ಯಾಂಡ್​​​​​​‌ನಲ್ಲಿ 2 ನಾಯಿಗಳು ಜೂಮ್ ಕರೆ ಮೂಲಕ ವಿಡಿಯೋ ಚಾಟ್ ನಡೆಸಿದ್ದು ಫುಲ್ ವೈರಲ್ ಆಗ್ತಿದೆ.

ಜೆರೆಮಿ ಹೊವಾರ್ಡ್ ಎಂಬುವವರು ಈ ಹಂಚಿಕೊಂಡಿದ್ದಾರೆ. ನಮ್ಮ ನಾಯಿ ಲೈಕಾ ತನ್ನ ಅತ್ಯುತ್ತಮ ಸ್ನೇಹಿತ ಹೆನ್ರಿಯೊಂದಿಗೆ ವಿಡಿಯೋ ಮೂಲಕ ಅದರದ್ದೆ ರೀತಿಯಲ್ಲಿ ಸಂಭಾಷಣೆ ನಡೆಸಿವೆ. ಲೈಕಾ ಮತ್ತು ಹೆನ್ರಿ ಇಬ್ಬರು ಬೆಸ್ಟ್ ಫ್ರೆಂಡ್.‌. ಲಾಕ್ ಡೌನ್​​​​ನಿಂದ ಎರಡು ನಾಯಿಗಳು ದೂರ ದೂರ ಆಗಬೇಕಾಯ್ತು. ಇವೆರೆಡು ಒಬ್ಬರನ್ನು ಒಬ್ಬರು ತುಂಬಾ ಮಿಸ್ ಮಾಡಿಕೊಳ್ತಿದ್ದವು. ಹೀಗಾಗಿ, ಏಪ್ರಿಲ್ 6ರಂದು ಜೆರೆಮಿ ತನ್ನ ಮುದ್ದಿನ ನಾಯಿ ಹಾಗೂ ಹೆನ್ರಿಗಾಗಿ ಜೂಮ್ ಕರೆ ಮಾಡಿಕೊಟ್ರಂತೆ. ನಾಯಿಗಳ ಈ ಮುದ್ದು ಸಂಭಾಷಣೆ ಸೋಷಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.

-masthmagaa.com

https://www.facebook.com/Storyful/videos/624480861439791/?t=49&v=624480861439791

Contact Us for Advertisement

Leave a Reply