ಮಿಸ್ ಆಗಿ ಬಾರ್ಡರ್ ಕ್ರಾಸ್​​​.. ಇಡೀ ಕುಟುಂಬವೇ ಅರೆಸ್ಟ್​​​..!

ಅಮೆರಿಕ: ಕಾರ್ ಓಡಿಸುತ್ತಾ ಮಿಸ್ ಆಗಿ ಅಮೆರಿಕಾ ಪ್ರವೇಶಿಸಿದ ಬ್ರಿಟನ್ ಮೂಲಕ ಕುಟುಂಬವನ್ನು ಅಮೆರಿಕಾ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಬ್ರಿಟನ್ ಮೂಲಕ ದಂಪತಿ ತಮ್ಮ 3 ತಿಂಗಳ ಮಗು ಮತ್ತು ಕುಟುಂಬದ ಕೆಲ ಸದಸ್ಯರೊಂದಿಗೆ ಪ್ರವಾಸ ನಿಮಿತ್ತ ಕೆನಡಾ ತೆರಳಿದ್ದರು. ಈ ವೇಳೆ ಕಾರ್​ನಲ್ಲಿ ಹೋಗುತ್ತಿದ್ದಾಗ ಅಡ್ಡ ಬಂದ ಪ್ರಾಣಿಯೊಂದನ್ನು ತಪ್ಪಿಸಲು ಹೋಗಿ ಅಮೆರಿಕಾ ಬಾರ್ಡರ್ ಕ್ರಾಸ್ ಮಾಡಿದ್ದಾರೆ. ಆದ್ರೆ ಅಮೆರಿಕಾ ಭದ್ರತಾ ಸಿಬ್ಬಂದಿ ಬ್ರಿಟನ್ ಮೂಲದ ಕುಟುಂಬವನ್ನು ಅಕ್ರಮವಾಗಿ ಗಡಿ ನುಸುಳಿದ ಆರೋಪದ ಅಡಿಯಲ್ಲಿ ಬಂಧಿಸಿದೆ. ಅಲ್ಲದೆ ವಲಸಿಗರ ಕೇಂದ್ರದಲ್ಲಿಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದಂಪತಿ ನಮ್ಮನ್ನು ಪ್ರಾಣಿಗಳಂತೆ ಟ್ರೀಟ್ ಮಾಡಿದ್ರು ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬ್ರಿಟನ್ ಕುಟುಂಬವನ್ನು ವಾಪಸ್ ಕಳುಹಿಸುವ ಸಾಧ್ಯತೆ ಇದೆ.

Contact Us for Advertisement

Leave a Reply