ಬ್ರಿಟನ್, ಜರ್ಮನಿ, ಫ್ರಾನ್ಸ್​​​ ಅಮೆರಿಕದ ಕೆನ್ನೆಗೆ ಬಾರಿಸಿವೆ..! ಚೀನಾ ವ್ಯಂಗ್ಯ

masthmagaa.com:

ಚೀನಾ ಮತ್ತು ಅಮೆರಿಕ  ನಡುವಿನ ಹಗ್ಗ ಜಗ್ಗಾಟ ಮುಂದುವರಿದಿದೆ. ಚೀನಾದ ಕಮ್ಯೂನಿಸ್ಟ್​ ಪಕ್ಷದ ದಿನಪತ್ರಿಕೆ ಗ್ಲೋಬಲ್ ಟೈಮ್ಸ್​​​ನಲ್ಲಿ ಅಮೆರಿಕಾ ಕಾಲೆಳೆದು ಲೇಖನ ಪ್ರಕಟಿಸಿದೆ. ಬ್ರಿಟನ್, ಜರ್ಮನಿ, ಫ್ರಾನ್ಸ್ ದೇಶಗಳು ಅಮೆರಿಕಾಗೆ ಕಪಾಳಮೋಕ್ಷ ಮಾಡಿದೆ. ಅಮೆರಿಕಾಗೆ ಹೀಗೇ ಆಗಬೇಕು ಅಂತ ಹೇಳಿದೆ. ವಿಶ್ವಸಂಸ್ಥೆಯಿಂದ ಇರಾನ್ ಮೇಲೆ ಹೇರಲಾಗಿರುವ ನಿರ್ಬಂಧ ಅಕ್ಟೋಬರ್ 18ರಂದು ಅಂತ್ಯವಾಗಲಿದೆ. ಹೀಗಾಗಿ ಇರಾನ್ ಮೇಲೆ ಮತ್ತೆ ನಿರ್ಬಂಧ ಹೇರುವಂತೆ ಅಮೆರಿಕ ಪ್ರಸ್ತಾವನೆ ಮುಂದಿಟ್ಟಿತ್ತು. ಆದ್ರೆ ಬ್ರಿಟನ್, ಫ್ರಾನ್ಸ್​​, ಜರ್ಮನಿ ಸೇರಿದಂತೆ ಹಲವು ದೇಶಗಳು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ಜಂಟಿ ಹೇಳಿಕೆ ನೀಡಿದ್ದವು.. ಡೊಮಿನಿಕ್ ದೇಶ ಮಾತ್ರವೇ ಅಮೆರಿಕಾದ ಪ್ರಸ್ತಾವನೆಗೆ ಬೆಂಬಲ ನೀಡಿತ್ತು.. ಇದನ್ನೇ ಉಲ್ಲೇಖಿಸಿ ಅಮೆರಿಕ ಕಾಲೆಳೆದಿರುವ ಚೀನಾ, 2003ರ ಯುದ್ಧದ ಬಳಿಕ ಪರಿಸ್ಥಿತಿ ಬದಲಾಗಿದ್ದು, ಅಮೆರಿಕಾಗೆ ಯೂರೋಪಿಯನ್ ಮಿತ್ರರ ಸಹಕಾರ ಸಿಗುತ್ತಿಲ್ಲ.. ಹೀಗಾಗಿ ಇರಾನ್ ವಿಚಾರದಲ್ಲಿ ಅಮೆರಿಕ ಏಕಾಂಗಿಯಾಗಿದೆ ಅಂತ ಹೇಳಿದೆ.

-masthmagaa.com:

Contact Us for Advertisement

Leave a Reply