ಇಂಗ್ಲೆಂಡ್​​ನಲ್ಲಿ ಆರೋಗ್ಯ ಸಚಿವೆಗೆ ಕೊರೋನಾ ಸೋಂಕು..!

masthmagaa.com:

ಬ್ರಿಟನ್​​: ಕೊರೋನಾ ವೈರಸ್ ಅತೀ ವೇಗವಾಗಿ ಜಗತ್ತಿನಾದ್ಯಂತ ಹರಡುತ್ತಿದೆ. ಈ ನಡುವೆ ಇಂಗ್ಲೆಂಡ್​​ನ ಆರೋಗ್ಯ ಸಚಿವೆ ನಡೀನ್ ಡೋರೀಸ್​​​​ ಕೂಡ ಈ ವೈರಸ್​​​​​​​​​ಗೆ ತುತ್ತಾಗಿದ್ದಾರೆ. ಈ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ ಅವರು ನನ್ನಲ್ಲೂ ಕೊರೋನಾ ವೈರಸ್ ಪತ್ತೆಯಾಗಿದೆ. ನಾನು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ ಅಂದ್ರು.

ಸದ್ಯ ನಡೀನಾಗೆ ಕೊರೋನಾ ವೈರಸ್ ಬಂದಿದ್ದು ಹೇಗೆ ಮತ್ತು ಯಾರಿಂದ ಅಂತ ಪತ್ತೆ ಮಾಡಲು ಆರೋಗ್ಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಬ್ರಿಟನ್​​ನಲ್ಲಿ ಈಗಾಗಲೇ 6 ಮಂದಿ ಸಾವನ್ನಪ್ಪಿದ್ದು, 370 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ನಡೀನಾ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ನೂರಾರು ಜನರ ಜೊತೆ ಸಂಪರ್ಕದಲ್ಲಿದ್ದರು. ಶುಕ್ರವಾರ ದಾಖಲೆಯೊಂದಕ್ಕೆ ಸಹಿ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ನಂತರ ಪರೀಕ್ಷೆ ವೇಳೆ ಅವರಲ್ಲಿ ಕೊರೋನಾ ವೈರಸ್ ಇರೋದು ಪತ್ತೆಯಾಗಿದೆ.

-masthmagaa.com

 

Contact Us for Advertisement

Leave a Reply