ಗಂಡು ಮಗುವಿಗೆ ಜನ್ಮ ನೀಡಿದ ಬ್ರಿಟನ್ ಪ್ರಧಾನಿಯ ಪ್ರೇಯಸಿ..!

masthmagaa.com:

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಗು ಲಂಡನ್​ನ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ ಅಂತ ಪ್ರಧಾನಿಯ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

ಬ್ರಿಟನ್​ ಪ್ರಧಾನಿ ಹಾಗೂ ಕ್ಯಾರಿ ಸೈಮಂಡ್ಸ್ ನ್ಯಾಷನ್​ ಹೆಲ್ತ್ ಸರ್ವಿಸ್​ನ ಹೆರಿಗೆ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತಾರೆ ಅಂತ ವಕ್ತಾರರು ತಿಳಿಸಿದ್ದಾರೆ.  ಕೊರೋನಾ ಸೋಂಕು ತಗುಲಿ ಆಸ್ಪತ್ರೆ ಸೇರಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇತ್ತೀಚೆಗಷ್ಟೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಅವರ ಪ್ರೇಯಸಿಗೂ ಆರಂಭದಲ್ಲಿ ಕೊರೋನಾ ಗುಣಲಕ್ಷಣಗಳು ಕಾಣಿಸಿದ್ದವು. ನಂತರದಲ್ಲಿ ಸೋಂಕು ತಗುಲಿಲ್ಲ ಅನ್ನೋದು ದೃಢಪಟ್ಟಿತ್ತು.

-masthmagaa.com

Contact Us for Advertisement

Leave a Reply