ಇಂಗ್ಲೆಂಡ್ ಪ್ರಧಾನಿಗೆ ಕೊರೋನಾ..! ಗರ್ಭಿಣಿ ಗರ್ಲ್​​​ಫ್ರೆಂಡ್​​​​​ಗೂ ಶುರುವಾಯ್ತು ಲಕ್ಷಣ..!

masthmagaa.com:

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಗೆಳತಿ, 6 ತಿಂಗಳ ಗರ್ಭಿಣಿ ಕ್ಯಾರಿ ಸಿಮಂಡ್ಸ್​ ಅವರಲ್ಲೂ ಕೊರೋನಾ ಲಕ್ಷಣಗಳು ಕಂಡು ಬಂದಿದೆ. ಬೋರಿಸ್ ಜಾನ್ಸನ್ ಅವರಲ್ಲಿ ಕೊರೋನಾ ಪತ್ತೆಯಾದ ಬಳಿಕ ಅವರ ಗೆಳತಿ ಕ್ಯಾರಿ ಸಿಮಂಡ್ಸ್​​ ತಮ್ಮನ್ನು ತಾವು ಐಸೋಲೇಷನ್​ನಲ್ಲಿ ಇರಿಸಿಕೊಂಡಿದ್ದರು. ಆದ್ರೆ ಈವರೆಗೆ ಅವರು ಕೊರೋನಾ ಪರೀಕ್ಷೆ ಮಾಡಿಸಿಕೊಂಡಿಲ್ಲ.

ಬೋರಿಸ್ ಜಾನ್ಸನ್​​​ಗೆ 55 ವರ್ಷ ವಯಸ್ಸಾಗಿದ್ದು, ಅವರ ಗೆಳತಿ ಕ್ಯಾರಿ ಸಿಮಂಡ್ಸ್​​ಗೆ 32 ವರ್ಷ ವಯಸ್ಸಾಗಿದೆ. ಲಂಡನ್​​ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಜಾನ್ಸನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಕಳೆದ ಫೆಬ್ರವರಿಯಲ್ಲಿ ಬೋರಿಸ್ ಜಾನ್ಸನ್ ಮತ್ತು ಸಿಮಂಡ್ಸ್ ಎಂಗೇಜ್ಮೆಂಟ್ ಮಾಡಿಕೊಂಡಿರೋದಾಗಿಯೂ, ಸಿಮಂಡ್ಸ್ ಈಗ ಗರ್ಭಿಣಿ ಅಂತಲೂ ಮಾಹಿತಿ ನೀಡಿದ್ದರು. 2010ರಲ್ಲಿ ಕೆಲಸದ ವಿಚಾರವಾಗಿ ಇಬ್ಬರ ಭೇಟಿಯಾಗಿತ್ತು.

-masthmagaa.com

 

Contact Us for Advertisement

Leave a Reply