ಕೊರೋನಾ ಸಾವಿನಾಟ: ಇಡೀ ವಿಶ್ವದಲ್ಲಿ ಸತ್ತವರೆಷ್ಟು ಗೊತ್ತಾ..?

masthmagaa.com:

ಕೊರೋನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಇದೀಗ ವಿಶ್ವದಲ್ಲಿ ಕೊರೋನಾ ಪೀಡಿತರ ಸಂಖ್ಯೆ 3,36,000ಕ್ಕೆ ಏರಿಕೆಯಾಗಿದೆ. ಸಾವನ್ನಪ್ಪಿದವರ ಪ್ರಮಾಣ 14,641ಕ್ಕೆ ಏರಿಕೆಯಾಗಿದೆ. ಅದ್ರಲ್ಲೂ ಇಟಲಿಯೊಂದರಲ್ಲೇ 5,476 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿ ಒಟ್ಟು 59,138 ಮಂದಿಗೆ ಸೋಂಕು ತಗುಲಿದೆ.

ಇನ್ನು ಅಮೆರಿಕದಲ್ಲೂ ಕೊರೋನಾ ಕಾಟ ಜಾಸ್ತಿಯಾಗ್ತಿದೆ. ಇಲ್ಲಿ ಒಟ್ಟು 429 ಮಂದಿ ಬಲಿಯಾಗಿದ್ದಾರೆ. ಜೊತೆಗೆ 34 ಸಾವಿರ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಮೂವರಲ್ಲಿ ಓರ್ವ ಅಮೆರಿಕಾದ ಪ್ರಜೆಗೆ ಮನೆಯಲ್ಲೇ ಇರುವಂತೆ ತಿಳಿಸಲಾಗಿದೆ.

ಇನ್ನು ಭಾರತದಲ್ಲಿ 415 ಪ್ರಕರಣಗಳು ಪತ್ತೆಯಾಗಿದ್ದು, 7 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಮತ್ತೂ 15 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 89ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply