ನ. 30ರವರೆಗೆ ಅನಲಾಕ್-5 ಮುಂದುವರಿಕೆ: ಶಾಲಾ-ಕಾಲೇಜು ಬಗ್ಗೆಯೂ ಉಲ್ಲೇಖ

masthmagaa.com:

ಸೆಪ್ಟೆಂಬರ್​ 30ರಂದು ಬಿಡುಗಡೆ ಮಾಡಿದ್ದ ಅನ್​ಲಾಕ್-5 ಗೈಡ್​ಲೈನ್ಸ್ ನವೆಂಬರ್​ 30ರವರೆಗೂ ವಿಸ್ತರಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ಇದರಲ್ಲಿ ನವೆಂಬರ್​ 30ರವರೆಗೆ ಶಾಲಾ-ಕಾಲೇಜುಗಳನ್ನು ಒಟ್ಟಿಗೆ ತೆರೆಯಲು ಅನುಮತಿ ನೀಡಿಲ್ಲ. ಆದ್ರೆ ರಾಜ್ಯ ಸರ್ಕಾರಗಳು ಹಂತ ಹಂತವಾಗಿ ಶಾಲಾ-ಕಾಲೇಜುಗಳನ್ನ ತೆರೆಯಲು ಅವಕಾಶವಿದೆ. ಕರ್ನಾಟಕದಲ್ಲಿ ನವೆಂಬರ್ 17ರಿಂದ ಡಿಗ್ರಿ, ಎಂಜಿನಿಯರಿಂಗ್, ಡಿಪ್ಲೊಮಾ, ಪಿಜಿ ಕಾಲೇಜುಗಳನ್ನ ತೆರೆಯುಲು ಅವಕಾಶ ನೀಡಲಾಗಿದೆಯಲಾ ಆ ರೀತಿ. ಹಂತ ಹಂತವಾಗಿ. ಒಂದೇಸಲ ಶಾಲೆ ಮತ್ತು ಕಾಲೇಜು ಎರಡನ್ನೂ ಓಪನ್ ಮಾಡ್ತೀವಿ ಅಂದ್ರೆ ಅದಕ್ಕೆ ಅವಕಾಶವಿಲ್ಲ. ಇನ್ನು ಯಾವುದೇ ಕಾರಣಕ್ಕೂ ರಾಜ್ಯದ ಒಳಗೆ ಮತ್ತು ರಾಜ್ಯ-ರಾಜ್ಯಗಳ ನಡುವಿನ ಸಂಚಾರಕ್ಕೆ ನಿರ್ಬಂಧ ವಿಧಿಸಬಾರದು. ಕಂಟೈನ್​ಮೆಂಟ್​ ಝೋನ್​​ಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಅಂತಾನೂ ಹೇಳಲಾಗಿದೆ.

-masthmagaa.com

Contact Us for Advertisement

Leave a Reply