ಮಗುವಿಗೆ ಸ್ಯಾನಿಟೈಸರ್ ಎಂದು ನಾಮಕರಣ ಮಾಡಿದ ತಂದೆ-ತಾಯಿ..!

masthmagaa.com:

ಉತ್ತರಪ್ರದೇಶ: ಕೊರೋನಾ ಲಾಕ್‌ಡೌನ್ ಮಧ್ಯೆ ಜನಿಸಿದ ಮಗುವಿಗೆ ಸ್ಯಾನಿಟೈಸರ್ ಎಂದು ನಾಮಕರಣ ಮಾಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಸಹರನ್​​​ಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಬಗ್ಗೆ ಮಾತನಾಡಿರುವ ಮಗುವಿನ ತಂದೆ ಓಂವೀರ್, ಕೊರೋನಾ ತಡೆಗೆ ಹ್ಯಾಂಡ್ ಸ್ಯಾನಿಟೈಸರ್ ಬಹಳ ಪ್ರಮುಖವಾಗಿದೆ. ಹೀಗಾಗಿ ಸರ್ಕಾರ ಹೆಚ್ಚಾಗಿ ಸ್ಯಾನಿಟೈಸರ್ ಪೂರೈಕೆ ಮಾಡ್ತಿದ್ದು, ಜನ ಕೂಡ ತಮ್ಮ ರಕ್ಷಣೆಗೆ ಬಳಕೆ ಮಾಡಿಕೊಳ್ತಿದ್ದಾರೆ. ಹಲವೆಡೆ ಉಚಿತವಾಗಿ ಸ್ಯಾನಿಟೈಸರ್ ಹಂಚಲಾಗ್ತಿದೆ. ಇದ್ರಿಂದ ನಾನು ಹಾಗೂ ನನ್ನ ಪತ್ನಿ ಬಹಳ ಆಕರ್ಷಿತರಾಗಿ ನಮ್ಮ ಮಗನಿಗೆ ಸ್ಯಾನಿಟೈಸರ್ ಹೆಸರನ್ನು ನಾಮಕರಣ ಮಾಡಿದ್ದೇವೆ. ಇದ್ರಿಂದ ಕೊರೋನಾ ವಿರುದ್ಧ ಹೋರಾಡಿದ ಅನುಭವ ನೆನಪಿಗೆ ಬರುತ್ತದೆ ಎಂದು ಹೇಳಿದ್ದಾರೆ.

ಕಳೆದ ಭಾನುವಾರವಷ್ಟೇ ಈ ಮಗು ಜನಿಸಿದೆ. ಆಂಧ್ರ ಪ್ರದೇಶದಲ್ಲೂ ಏಪ್ರಿಲ್ 8ರಂದು ಜನಿಸಿದ ಮಕ್ಕಳಿಬ್ಬರಿಗೆ ಕೊರೋನಾ ಕುಮಾರ್ ಹಾಗೂ ಕೊರೋನಾ ಕುಮಾರಿ ಎಂದು ನಾಮಕರಣ ಮಾಡಲಾಗಿದೆ. ಇದಷ್ಟೇ ಅಲ್ಲ ಮತ್ತೊಂದು ಕಡೆ ಅವಳಿ ಮಕ್ಕಳಿಬ್ಬರಿಗೆ ಕೊರೋನಾ, ಕೋವಿಡ್ ಹೆಸರಿಡಲಾಗಿತ್ತು. ಈಗ ಸ್ಯಾನಿಟೈಸರ್ ಕೂಡ ಆ ಸಾಲಿಗೆ ಸೇರ್ಪಡೆಯಾಗಿದೆ.

-masthmagaa.com

Contact Us for Advertisement

Leave a Reply