ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ: ಅಮೆರಿಕ ಅಧಿಕಾರಿಗಳಿಂದ ಸ್ಪಷ್ಟನೆ

masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದಿದ್ದ ಡೊನಾಲ್ಡ್​ ಟ್ರಂಪ್ ಅವರ ಆರೋಪವನ್ನು ಚನಾವಣಾ ಅಧಿಕಾರಿಗಳು ನಿರಾಕರಿಸಿದ್ದಾರೆ.

ಮತದಾನದ ವೇಳೆ ಸುಮಾರು 27 ಲಕ್ಷ ಮತಗಳನ್ನು ಡಿಲೀಟ್ ಮಾಡಲಾಗಿದೆ ಅಂತ ಡೊನಾಲ್ಡ್ ಟ್ರಂಪ್ ಆರೋಪಿಸಿದ್ರು. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳ ಸಮೂಹ, ಅಮೆರಿಕದ ಚುನಾವಣೆ ಸುರಕ್ಷಿತವಾಗಿ ನಡೆದಿದ್ದು, ಯಾವುದೇ ರೀತಿಯ ಮೋಸ ನಡೆದಿಲ್ಲ. ಮತದಾನದಲ್ಲಿ ಯಾವುದೇ ವಂಚನೆ ನಡೆದಿರೋದಕ್ಕೆ ಸಾಕ್ಷ್ಯಗಳಿಲ್ಲ. ನವೆಂಬರ್ 3ರಂದು ದೇಶದಲ್ಲಿ ಸುರಕ್ಷಿತವಾದ ಮತದಾನ ನಡೆದಿದೆ. ಚುನಾವಣೆ ಪ್ರಕ್ರಿಯೆಯ ಸುರಕ್ಷತೆ ಮತ್ತು ಅಖಂಡತೆ ಬಗ್ಗೆ ನಮಗೆ ನಂಬಿಕೆ ಇದೆ. ಎಲ್ಲರಿಗೂ ಆ ನಂಬಿಕೆ ಇರಬೇಕು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply