ಕೊರೋನಾ: ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಅಮೆರಿಕ..!

masthmagaa.com:

ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಚೀನಾ, ಇಟಲಿಯನ್ನು ಹಿಂದಿಕ್ಕಿ ಅಮೆರಿಕಾ ಮೊದಲ ಸ್ಥಾನಕ್ಕೇರಿದೆ. ಅಮೆರಿಕಾದ 86 ಸಾವಿರ ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಚೀನಾ 82 ಸಾವಿರ ಪ್ರಕರಣಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನು ಇಟಲಿಯಲ್ಲಿ 81 ಸಾವಿರ ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಇನ್ನು ಸಾವಿನ ವಿಚಾರದಲ್ಲಿ ಬಂದ್ರೆ ಇಟಲಿಯೇ ಮೊದಲ ಸ್ಥಾನದಲ್ಲಿದ್ದು, ಈವರೆಗೆ 8,215 ಮಂದಿ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ 3,200 ಮಂದಿ ಸಾವನ್ನಪ್ಪಿದ್ರೆ, ಅಮೆರಿಕಾದಲ್ಲಿ 1,300 ಮಂದಿ ಜೀವ ಬಿಟ್ಟಿದ್ದಾರೆ.

ಇನ್ನು ಇಡೀ ವಿಶ್ವದಾದ್ಯಂತ 5,32,000 ಮಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಜೊತೆಗೆ 24,000ಕ್ಕೂ ಹೆಚ್ಚು ಮಂದಿ ಈ ಮಹಾಮಾರಿಗೆ ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply