ಕ್ರೇಜಿ ಇರುವೆಗಳ ಹಾವಳಿಗೆ ಫಂಗಸ್ಸಿನ ಬಾಣ ಕಂಡುಹಿಡಿದ ತಜ್ಞರು!

masthmagaa.com:

ಟೆಕ್ಸಾಸ್ ಸೇರಿದಂತೆ ದಕ್ಷಿಣ ಅಮೆರಿಕದ ಭಾಗಗಳಲ್ಲಿ ಕ್ರೇಜಿ ಇರುವೆಗಳ ಹಾವಳಿ ಜಾಸ್ತಿ ಇದೆ. ಇವುಗಳು ವಿಚಿತ್ರವಾದ ಇರುವೆಗಳಾಗಿದ್ದು ಇವು ಎಲ್ಲಿಗೆ ಹೋದ್ರೂ ಅಲ್ಲಿನ ಸ್ಥಳೀಯ ಕೀಟ ಸಾಮ್ರಾಜ್ಯವನ್ನು ನಾಶ ಮಾಡಿ, ಹಲ್ಲಿ, ಹಕ್ಕಿಗಳನ್ನು ಕೂಡ ಓಡಿಸಿ ಬಿಡುತ್ತವೆ. ಎಷ್ಟರ ಮಟ್ಟಿಗೆ ಅಂದ್ರೆ ಮೊಲಗಳಿಗೂ ಕೂಡ ಆಸಿಡ್ ಸ್ಪ್ರೇ ಮಾಡಿ ಕುರುಡಾಗಿ ಮಾಡೋ ಸಾಮರ್ಥ್ಯ ಹೊಂದಿವೆ. ಇಂಥಾ ಇರುವೆಗಳ ವಿರುದ್ಧ ಕೆಲಸ ಮಾಡುವ ಫಂಗಸ್​ ಒಂದನ್ನು ಟೆಕ್ಸಾಸ್ ಯುನಿವರ್ಸಿಟಿಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇದು ಕ್ರೇಜಿ ಇರುವೆಗಳ ಆಕ್ರಮಣವನ್ನು ತಡೆಯಲಿವೆ ಅನ್ನೋದು ತಜ್ಞರ ಅಭಿಪ್ರಾಯ. ಲ್ಯಾಬ್​ಗಳಲ್ಲಿ ಇದು ಪ್ರೂವ್ ಆಗಿದ್ದು, ಪರಿಸರದಲ್ಲಿ ಪ್ರಯೋಗ ನಡೆಯಬೇಕಿದೆ. ಅರ್ಜೆಂಟೈನಾ ಮತ್ತು ಬ್ರೆಜಿಲ್​​ನಲ್ಲಿ ಹೆಚ್ಚಾಗಿರೋ ಈ ಇರುವೆಗಳು ಹಡಗಿನಲ್ಲಿ ಅಮೆರಿಕಗೆ ಬಂದಿದ್ವು ಅಂತ ಹೇಳಲಾಗುತ್ತೆ. ಇವುಗಳು ಸಾಮಾನ್ಯ ಇರುವೆಗಳಂತೆ ಲೈನ್​ನಲ್ಲಿ ಓಡಾಡಲ್ಲ.. ಒಟ್ರಾಸಿಯಾಗಿ ಓಡಾಡ್ತವೆ.. ಹೀಗಾಗಿ ಕ್ರೇಜಿ ಇರುವೆಗಳು ಅಂತ ಕರೆಯಲಾಗುತ್ತೆ. ಇವುಗಳು ಎಸಿ ಸೇರಿದಂತೆ ಎಲೆಕ್ಟ್ರಿಕ್​ ವಸ್ತುಗಳ ಒಳಗೂ ತಮ್ಮ ಗೂಡು ಕಟ್ಕೊಂಡು ಕಾಟ ಕೊಡುತ್ತವೆ.

-masthmagaa.com

Contact Us for Advertisement

Leave a Reply