ಬಾಲಕಿ ಮೇಲೆ ರೇಪ್..21 ದಿನಗಳಲ್ಲಿ ಕೋರ್ಟ್ ತೀರ್ಪು..!

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲೆ ಅತ್ಯಾಚಾರ ಎಸಗೋ ದುಷ್ಟರಿಗೆ ಶಿಕ್ಷೆಯಾಗಲ್ಲ ಅನ್ನೋ ಆರೋಪಗಳಿವೆ. ಎಷ್ಟೋ ಪ್ರಕರಣಗಳಲ್ಲಿ ಸರಿಯಾದ ಸಾಕ್ಷ್ಯ ಸಿಗದೇ ಆರೋಪಿಗಳು ಜಾಮೀನು ಪಡೆದು ಹೊರಬಂದು ಬಿಡುತ್ತಾರೆ. ಆದ್ರೆ ಉತ್ತರ ಪ್ರದೇಶದಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಕೋರ್ಟ್ 21 ದಿನಗಳಲ್ಲಿ ವಿಚಾರಣೆ ನಡೆಸಿ, ಜೀವಾವಧಿ ಶಿಕ್ಷೆ ನೀಡಿದೆ. ಪೊಲೀಸರು ಕೂಡ ಚಾರ್ಜ್‍ಶೀಟ್‍ನಿಂದ ಹಿಡಿದು ಡಿಎನ್‍ಎ ರಿಪೋರ್ಟ್‍ವರೆಗೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಒಟ್ಟು ಮಾಡಿದ್ದರು.

ಉತ್ತರಪ್ರದೇಶದ ಕಾನ್ಪುರದ ಬಿಠೂಕ್ ನಲ್ಲಿ ಜುಲೈ 27ರಂದು 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ ಪೊಲೀಸರು ಸೆಪ್ಟೆಂಬರ್ 17ರಂದು ಚಾರ್ಜ್‍ಶೀಟ್ ದಾಖಲಿಸಿದ್ದರು. ಸೆಪ್ಟೆಂಬರ್ 19ರಂದು ಕೋರ್ಟ್‍ನಲ್ಲಿ ವಿಚಾರಣೆ ಶುರುವಾಗಿತ್ತು. ಪ್ರಕರಣದಲ್ಲಿ ಬಾಲಕಿಗೆ ನ್ಯಾಯ ಸಿಗಬೇಕು, ಆರೋಪಿಗೆ ಶಿಕ್ಷೆಯಾಗಬೇಕು ಎಂಬ ಕಾರಣಕ್ಕೆ ಪೊಲೀಸರು ಡಿಎನ್‍ಎ ಟೆಸ್ಟ್ ಕೂಡ ಮಾಡಿಸಿದ್ದರು. 21 ದಿನಗಳ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

Contact Us for Advertisement

Leave a Reply