ಕಾಶ್ಮೀರದಲ್ಲಿ ವಿಜಯ್‌, ಸಂಜಯದತ್ತ ಮುಖಾಮುಖಿ.. ಲಿಯೋ ಸಿನಿಮಾದ ಭರ್ಜರಿ ಶೂಟಿಂಗ್‌.

masthmagaa.com:

ಬಾಲಿವುಡ್‌ ಸ್ಟಾರ್‌ ಸಂಜಯ್‌ ದತ್‌ ಇತ್ತಿಚೇಗೆ ಬಾಲಿವುಡ್‌ ಸಿನಿಮಾಗಳಿಗಿಂತ ಹೆಚ್ಚು ದಕ್ಷಿಣದ ಸಿನಿಮಾಗಳಲ್ಲಿ ಅಬ್ಬರಿಸುತ್ತಿದ್ದಾರೆ. ಕೆಜಿಎಫ್‌-2 ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಸೌತ್ ಇಂಡಿಯನ್‌ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಒಂದರ ಹಿಂದೊಂದು ಅರಸಿ ಬರುತ್ತಿವೆ. ಇದೀಗ ನಿರ್ದೇಶಕ ಲೋಕೇಶ್‌ ಕನಗರಾಜ್‌ ಅವರ ಲಿಯೋ ಸಿನಿಮಾದಲ್ಲಿ ಸಂಜಯ್‌ಗೆ ಭಾರಿ ಫವರ್‌ಫುಲ್‌ ವಿಲನ್‌ ಪಾತ್ರ ದೊರೆತಿದೆ. ಈ ಸಿನಿಮಾದ ಶೂಟಿಂಗ್‌ ಪ್ರಸ್ತುತ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಸಂಜಯ್‌ ದತ್ತ ನೇರವಾಗಿ ಕಾಶ್ಮೀರದಲ್ಲಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ಸ್ಟಾರ್‌ ನಟ ವಿಜಯ ಸೇತುಪತಿ ಲಿಯೋ ಚಿತ್ರದಲ್ಲಿ ನಾಯಕ ನಟರಾಗಿ ಮಿಂಚಲಿದ್ದಾರೆ.

ಲಿಯೋ ಚಿತ್ರತಂಡ ಸಂಜಯ್‌ ಅವರನ್ನ ಅದ್ದೂರಿಯಾಗಿ ಸ್ವಾಗತಿಸಿಕೊಂಡಿದೆ, ಈ ವಿಡಿಯೋವನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದೆ. ಸಂಜಯ್‌ ಅವರನ್ನ ಲಿಯೋ ತಂಡ ಹೂಗುಚ್ಚ ನೀಡಿ ಸ್ವಾಗತಿಸಿದ್ದು, ನಂತರ ಭರ್ಜರಿ ಕಾರ್‌ನಲ್ಲಿ ಸೆಟ್‌ಗೆ ಕರೆದುಕೊಂಡು ಬಂದಿದ್ದು ವಿಡಿಯೋದಲ್ಲಿ ಕಂಡುಬಂದಿದೆ. ಸಂಜಯ್‌ ಸೆಟ್‌ಗೆ ತಲುಪುತ್ತಿದ್ದಂತೆಯೆ ಅವರನ್ನ ನಟ ವಿಜಯ್‌ ರಿಸೀವ್‌ ಮಾಡಿಕೊಂಡಿದ್ದಾರೆ. ವಿಜಯ್, ಲೋಕೇಶ್ ಹಾಗೂ ಸಂಜಯ್‌ ಸ್ವಲ್ಪ ಸಮಯ ಮಾತುಕತೆ ನಡೆಸಿ ಬಳಿಕ ಸಂಜಯ್‌ಗೆ ಬೀಳ್ಕೊಟ್ಟಿದ್ದಾರೆ. ಇನ್ನೂ ಈ ಚಿತ್ರದ ಶೂಟಿಂಗ್‌ ಸತತವಾಗಿ ನಡೆಯಲಿದ್ದು, ವಿಜಯ್‌ ಹಾಗೂ ಸಂಜಯ್‌ ಮೊದಲ ಬಾರಿಗೆ ಎದುರಾಗುವ ದೃಶ್ಯಗಳನ್ನ ಕಾಶ್ಮೀರದಲ್ಲಿ ಸೆರೆಹಿಡಿಯಲಾಗುತ್ತೆ, ಕೆಜಿಎಫ್‌ ಮಾದರಿಯಲ್ಲೇ ಚಿತ್ರದಲ್ಲಿ ಸಂಜಯ್‌ ಫವರ್‌ಫುಲ್ ವಿಲನ್‌ ಆಗಿ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ. ಮಾಸ್ಟರ್‌ ಚಿತ್ರದ ನಂತರ ಲೋಕೇಶ್‌ ಕನಗರಾಜ್‌‌ ನಿರ್ದೇಶನದಲ್ಲಿ ವಿಜಯ್‌ ನಟಿಸ್ತಾ ಇರೋ ಎರಡನೇ ಸಿನಿಮಾ ಇದು. ವಿಜಯ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡ ಮಾಸ್ಟರ್‌ ಸೂಪರ್‌ ಹಿಟ್‌ ಆಗಿತ್ತು.

-masthmagaa.com

Contact Us for Advertisement

Leave a Reply