ಪೊಲೀಸ್ ತಲೆಯ ಹೇನು ತೆಗೆದ ಮಂಗ..! ವಿಡಿಯೋ ನೋಡಿ…

ಸೋಷಿಯಲ್ ಮೀಡಿಯಾದಲ್ಲಿ ಮಂಗನ ವಿಡಿಯೋವೊಂದು ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಪೊಲೀಸ್ ಒಬ್ಬರು ಕುಳಿತು ಕೆಲಸ ಮಾಡುತ್ತಿದ್ರೆ, ಮಂಗ ತಲೆ ಮೇಲೆ ಹತ್ತಿ ಹೇನು ತೆಗೆಯುತ್ತಿದೆ. ಉತ್ತರ ಪ್ರದೇಶದ ಪಿಲಿಬೀತ್ ನ ವಿಡಿಯೋ ಇದಾಗಿದೆ. ಇಲ್ಲಿನ ಕೋತ್ ವಾಲಿ ನಗರದ ಠಾಣೆಯಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಕುಳಿತು ದೂರು ಸ್ವೀಕರಿಸುತ್ತಿದ್ದರು. ಆಗ ಅಲ್ಲಿಗೆ ಬಂದ ಮಂಗ ಅವರ ಭುಜದ ಮೇಲೆ ಕುಳಿತಿದೆ.

ಇನ್‍ಸ್ಪೆಕ್ಟರ್ ಶ್ರೀಕಾಂತ್ ದ್ವಿವೇದಿ ದೂರು ಸ್ವೀಕರಿಸುತ್ತಿದ್ದರೆ ಮಂಗ ಅವರ ತಲೆಯಲ್ಲಿದ್ದ ಹೇನು ಹೆಕ್ಕಿ ಹೆಕ್ಕಿ ತಿಂದಿದೆ. ಮಂಗನನ್ನು ಕೆಳಗಿಳಿಸಲು ಯತ್ನಿಸಿದರಾದರೂ ಮಂಗ ಮಾತ್ರ ಕೇಳಲೇ ಇಲ್ಲ. ಸ್ವಲ್ಪ ಹೊತ್ತಿನ ಬಳಿಕ ಇನ್‍ಸ್ಪೆಕ್ಟರ್ ತಲೆಯಲ್ಲಿ ಹೇನು ಕಡಿಮೆಯಾಯ್ತೋ ಏನೋ, ತಾನಾಗೇ ಕೆಳಗಿಳಿದು ಹಾರುತ್ತಾ ಅಲ್ಲಿಂದ ಓಡಿಹೋಗಿದೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಫುಲ್ ವೈರಲ್ ಆಗ್ತಿದೆ.

Contact Us for Advertisement

Leave a Reply