ದೇವಸ್ಥಾನದಲ್ಲಿ ಇಬ್ಬರು ಹುಡುಗಿಯರನ್ನು ಒಟ್ಟಿಗೆ ಮದುವೆಯಾದ ಹುಡುಗ..!

ಉತ್ತರಪ್ರದೇಶ: ದೇವಸ್ಥಾನದಲ್ಲಿ ಯುವಕನೊಬ್ಬ ಒಂದೇ ದಿನ ಒಟ್ಟೊಟ್ಟಿಗೆ ಇಬ್ಬರು ಹುಡುಗಿಯರನ್ನು ಮದುವೆಯಾಗಿದ್ದಾನೆ. ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ಈ ಘಟನೆ ವರದಿಯಾಗಿದೆ. ಇಲ್ಲಿನ ಕರ್ನಲ್​​ಗಂಜ್​​ನ ಡರ್​ಹರಿಯಾದಲ್ಲಿ ಯುವಕನೊಬ್ಬ 4 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದ್ರೆ ಇತ್ತೀಚೆಗೆ ಮತ್ತೊಂದು ಪ್ರೀತಿ ಶುರು ಮಾಡಿಕೊಂಡಿದ್ದ. ಆಕೆ ಮದುವೆಯಾಗು ಇಲ್ಲದಿದ್ರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ಗಲಾಟೆ ಮಾಡಿದ್ದಳು. ಕೋಪಗೊಂಡ ಯುವಕ ಯುವತಿಯ ಕಪಾಳಕ್ಕೆ ಬಾರಿಸಿದ್ದಾನೆ. ನಂತರ ಪೊಲೀಸರು ಯುವಕನನ್ನು ಅರೆಸ್ಟ್​  ಮಾಡಿ ಸರಿಯಾಗಿ ಗುಮ್ಮಿದ್ದಾರೆ.

ನಂತರ ಹೊರಬಂದ ಯುವಕ ಹೊಸ ಪ್ರಿಯತಮೆ ಜೊತೆ ದೇವಸ್ಥಾನದಲ್ಲಿ ಮದುವೆಯಾಗಲು ಮುಂದಾಗಿದ್ದಾನೆ. ಆಗ ಸಡನ್ನಾಗಿ ಅಲ್ಲಿಗೆ ಹಳೆಯ ಪ್ರಿಯತಮೆ ಬಂದಿದ್ದಾಳೆ. ಅಲ್ಲದೆ ದೇವಸ್ಥಾನದಲ್ಲೇ ಹಂಗಾಮಾ ಮಾಡಿದ್ದಾಳೆ. ಕೊನೆಗೆ ಬೇರೆ ದಾರಿಯಿಲ್ಲದೇ ಯುವಕ ಇಬ್ಬರಿಗೂ ಕುಂಕುಮ ಇಟ್ಟು, ತಾಳಿ ಕಟ್ಟಿದ್ದಾನೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಶಾಕಿಂಗ್ ಮದ್ವೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

Contact Us for Advertisement

Leave a Reply