ಲಾಕ್​​​ಡೌನ್​​ ನಡುವೆ ಡ್ರೋನ್ ಮೂಲಕ ಟಾಯ್ಲೆಟ್ ಪೇಪರ್ ಕಳುಹಿಸಿದ..!

masthmagaa.com:

ಇಂಗ್ಲೆಂಡ್: ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಭಾರತ ಮಾತ್ರವಲ್ಲದೇ ಇಂಗ್ಲೆಂಡ್ ಕೂಡ ಸಂಪೂರ್ಣವಾಗಿ ಲಾಕ್​ಡೌನ್ ಆಗಿದೆ. ಈ ನಡುವೆ ಇಂಗ್ಲೆಂಡ್​ನ ನಾರ್ತ್​​​​​ಆಮ್ಟನ್​​ಶೀರ್​​​ನಲ್ಲಿರೋ ವ್ಯಕ್ತಿಯೊಬ್ಬರು ತನ್ನ ಸಹೋದರಿಗೆ ಡ್ರೋನ್ ಮೂಲಕ ಟಾಯ್ಲೆಟ್ ಪೇಪರ್ ಕಳುಹಿಸಿಕೊಟ್ಟಿದ್ದಾರೆ. 48 ವರ್ಷದ ಪೀಟ್​ ಫಾರ್ಮರ್ ಮಾರಿಸ್ ಡಿಸ್ಟ್ರಿಬ್ಯೂಷನ್ ಎಂಬ ಸೂಪರ್​ಮಾರ್ಕೆಟ್​​​ನಲ್ಲಿ ಕೆಲಸ ಮಾಡ್ತಿದ್ದಾರೆ. ಇವರ ಮನೆಯಿಂದ 2 ಬೀದಿ ಅಂತರದಲ್ಲಿ ಇವರ ಸಹೋದರಿ ವಾಸವಾಗಿದ್ದಾರೆ.

ನೈಟ್ ಶಿಫ್ಟ್ ಮುಗಿಸಿ ಬಂದಿದ್ದ ಪೀಟ್ ಫಾರ್ಮರ್ ಬಳಿ ಸಹೋದರಿ ಟಾಯ್ಲೆಟ್ ಪೇಪರ್ ಕೇಳಿದ್ದರು. ಹೀಗಾಗಿ ಪೀಟ್ ಫಾರ್ಮರ್ ಡ್ರೋನ್ ಮೂಲಕ ಟಾಯ್ಲೆಟ್ ಪೇಪರ್ ಕಳುಹಿಸಿ, ತಮಾಷೆ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ತಮಾಷೆಗೆ ಹೀಗೆ ಮಾಡಿದ್ದೇನೆ. ಟಾಯ್ಲೆಟ್ ಪೇಪರ್ ಆಗಲಿ..ಆಹಾರದ ಸಾಮಗ್ರಿಯಾಗಲಿ…ಯಾವುದೇ ಕೊರತೆ ಇಲ್ಲ.. ನಾವು ದಿನದ 24 ಗಂಟೆಯೂ ಮನೆಮನೆಗೆ ಅಗತ್ಯ ಸಾಮಾಗ್ರಿಯನ್ನು ತಲುಪಿಸುವ ಕೆಲಸ ಮಾಡ್ತಿದ್ದೇವೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply