ಮಾಸ್ಕ್​ ಧರಿಸದೇ ಬಂದ ಮಹಿಳೆ! ಪ್ರಶ್ನಿಸಿದ ಮಾರ್ಷಲ್​​​ಗೆ ಪಂಚ್

masthmagaa.com:

ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೋನಾ ಜಾಸ್ತಿಯಾಗ್ತಾ ಇದೆ. ಆದ್ರೆ ಜನರಿಗೆ ಬುದ್ಧಿ ಮಾತ್ರ ಬರುತ್ತಿಲ್ಲ.. ಮುಂಬೈನ ಕಾಂಡಿವಲಿಯಲ್ಲಿ ಮಹಿಳೆಯೊಬ್ಬರು ಮಾಸ್ಕ್ ಧರಿಸದೇ ಆಟೋದಲ್ಲಿ ಬರ್ತಿದ್ರು. ಇದನ್ನು ಕಂಡ ಬಿಎಂಸಿಯ(ಬೃಹತ್ ಮುಂಬೈ ಕಾರ್ಪೊರೇಷನ್​​​) ಮಹಿಳೆಯೊಬ್ಬರು ತಡೆದಿದ್ದಾರೆ. ಮಹಿಳೆಯನ್ನು ಆಟೋದಿಂದ ಇಳಿಸಿದ್ದಾರೆ. ಆದ್ರೆ ಮಹಿಳೆ ಮತ್ತೆ ಆಟೋ ಹತ್ತಿ ಹೊರಡೋಕೆ ಮುಂದಾಗಿದ್ದಾರೆ. ಈ ವೇಳೆ ಮತ್ತೆ ಬಿಎಂಸಿ ಮಹಿಳೆ ತಡೆದಾಗ ಸಿಟ್ಟಾದ ಮಹಿಳೆ ಬಿಎಂಸಿಯ ಮಹಿಳೆಗೇ ಪಂಚ್ ಮಾಡಿದ್ದಾರೆ. ಕಾಲಿಂದ ಒದ್ದು, ಹಿಗ್ಗಾಮುಗ್ಗ ಥಳಿಸಿದ್ದಾರೆ. ನನ್ನ ತಡೆಯೋಕೆ ಎಷ್ಟು ಧೈರ್ಯ ನಿಂಗೆ, ನನ್ನ ಮುಟ್ಟೋಕೆ ಎಷ್ಟು ಧೈರ್ಯ ನಿನಗೆ ಅಂತ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂದಹಾಗೆ ಮುಂಬೈನಲ್ಲಿ ಮಾಸ್ಕ್ ಧರಿಸದೇ ಓಡಾಡಿದ್ರೆ 200 ರೂಪಾಯಿ ಫೈನ್ ಇದೆ..ನಿಯಮ ಪಾಲಿಸದೇ ಇದ್ರೆ ಕಠಿಣ ಲಾಕ್​ಡೌನ್ ಹೇರೋದಾಗಿ ಉದ್ಧವ್ ಠಾಕ್ರೆ ಕೂಡ ಎಚ್ಚರಿಸಿದ್ದಾರೆ. ಆದ್ರೂ ಜನರ ಬೇಜವಾಬ್ದಾರಿ ಹೇಗಿದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

-masthmagaa.com

Contact Us for Advertisement

Leave a Reply