RSS ನಾಯಕ, 8 ತಿಂಗಳ ಗರ್ಭಿಣಿ ಪತ್ನಿ, ಮಗನ ಕೊಲೆ..!

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಗಂಡ, ಹೆಂಡತಿ ಮತ್ತವರ ಮಗನನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿದೆ. ಜಿಯಾಗಂಜ್‍ನಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಬಂದು ಪ್ರಕಾಶ್ ಪಾಲ್ ಎಂದು ಗುರುತಿಸಲಾಗಿದ್ದು, ಇವರು ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷರಾಗಿದ್ದರು. ಇನ್ನು ಇವರ ಪತ್ನಿ 8 ತಿಂಗಳ ತುಂಬು ಗರ್ಭಿಣಿಯಾಗಿದ್ದರು ಅಂತಲೂ ತಿಳಿದುಬಂದಿದೆ. ಪ್ರಕಾಶ್ ಮೃತಪಟ್ಟ 36 ಗಂಟೆಗಳ ಬಳಿಕ ಈತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯನಾಗಿದ್ದ ಎಂಬ ವಾದ ಕೇಳಿಬಂದಿದೆ. ಆತನ ನಮ್ಮ ಸಂಘದ ಸದಸ್ಯ ಅಂತ RSS ಹೇಳಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ RSS ಮುಖ್ಯಸ್ಥ ವಿಸ್ಣು ಬಸು, ಇದು ರಾಜಕೀಯ ದ್ವೇಷಕ್ಕೆ ನಡೆದ ಹತ್ಯೆ ಎಂದು ನಮಗೆ ಅನ್ನಿಸುತ್ತಿಲ್ಲ. ಆದ್ರೆ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ನಾವು ಮರಣೋತ್ತರ ಪರೀಕ್ಷೆ ವರದಿಗೆ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಘಟನೆಯನ್ನು ಬಿಜೆಪಿ ಕೂಡ ಖಂಡಿಸಿದೆ.

Contact Us for Advertisement

Leave a Reply