ಸ್ಪ್ಯಾನಿಶ್ ಫ್ಲೂಗಿಂತ ವೇಗವಾಗಿ ಕೊರೋನಾ ಮಟ್ಟಹಾಕಬಹುದು: WHO

masthmagaa.com:

ಜಿನೇವಾ: ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಮಹಾಮಾರಿಯನ್ನು ಎರಡು ವರ್ಷಗಳ ಒಳಗೆಯೇ ಕಂಪ್ಲೀಟ್ ಆಗಿ ತೊಡೆದು ಹಾಕಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, 1918ರಲ್ಲಿ ವ್ಯಾಪಿಸಿದ್ದ ಸ್ಪ್ಯಾನಿಶ್ ಫ್ಲೂಗಿಂತ ವೇಗವಾಗಿ ಕೊರೋನಾವನ್ನು ಮಟ್ಟಹಾಕಬಹುದು.. 1918ಕ್ಕೆ ಹೋಲಿಸಿದ್ರೆ ಈಗ ಜಾಗತೀಕರಣ, ನಿಕಟತೆ, ಸಂಪರ್ಕ ಹೆಚ್ಚಿರೋದ್ರಿಂದ ಕೊರೋನಾ ವೈರಸ್ ವಿಶ್ವದಾದ್ಯಂತ ಅತ್ಯಂತ ವೇಗವಾಗಿ ಹರಡ್ತಿದೆ. ಆದ್ರೂ ಕೂಡ 1918ಕ್ಕೆ ಹೋಲಿಸಿದ್ರೆ ಈಗ ನಾವು ತಂತ್ರಜ್ಞಾನದಲ್ಲಿ ಮುಂದುವರಿದಿದ್ದೇವೆ. ಎಲ್ಲಾ ತಂತ್ರಜ್ಞಾನಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು, ಲಸಿಕೆ ಕಂಡು ಹಿಡಿಯುವ ಮೂಲಕ ಸ್ಪ್ಯಾನಿಶ್ ಫ್ಲೂಗಿಂತಲೂ ವೇಗವಾಗಿ ಕೊರೋನಾವನ್ನು ಮಟ್ಟ ಹಾಕಬಹುದು ಎಂದಿದ್ದಾರೆ. ಈ ಹಿಂದೆ 1918ರಲ್ಲಿ ವ್ಯಾಪಿಸಿದ್ದ ಸ್ಪ್ಯಾನಿಶ್ ಫ್ಲೂ 2 ವರ್ಷಕ್ಕೂ ಹೆಚ್ಚು ಸಮಯ ವಿಶ್ವವನ್ನು ಕಾಡಿತ್ತು.

-masthmagaa.com

Contact Us for Advertisement

Leave a Reply