ಹಣ ಕೊಡಲ್ಲ ಎಂದ ಟ್ರಂಪ್​ಗೆ ವಿಶ್ವ ಆರೋಗ್ಯ ಸಂಸ್ಥೆ ಗುದ್ದು..!

masthmagaa.com:

ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಹೇಳಿದಂತೆ ಕೇಳ್ತಿದೆ. ಕಾಯಿಲೆ ಬಗ್ಗೆ ನಮಗೆ ಮೊದಲೇ ಹೇಳಲಿಲ್ಲ. ಹೀಗಾಗಿ ನಾವು ಅದಕ್ಕೆ ನೀಡಬೇಕಾದ ಹಣವನ್ನ ತಡೆ ಹಿಡೀತೀವಿ ಅಂತ ಎಚ್ಚರಿಕೆ ಕೊಟ್ಟ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ವಿಶ್ವ ಆರೋಗ್ಯ ಸಂಸ್ಥೆ ತಿರುಗೇಟು ಕೊಟ್ಟಿದೆ.

ಈ ಬಗ್ಗೆ ಮಾತನಾಡಿರೋ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧನಾಮ್ ಗೆಬ್ರಿಯೆಸಸ್, ಕೊರೋನಾ ವೈರಸ್​ ಬಿಕ್ಕಟ್ಟನ್ನು ವಿಶ್ವ ಆರೋಗ್ಯ ಸಂಸ್ಥೆ ಸರಿಯಾಗಿ ನಿರ್ವಹಿಸಿದೆ. ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡೋದನ್ನ ಬಿಟ್ಟು ಅಮೆರಿಕ ಹಾಗೂ ಚೀನಾ ಒಂದಾಗಿ ಕಾಯಿಲೆ ವಿರುದ್ಧ ಹೋರಾಡಬೇಕು. ರಾಜಕೀಯ ಪಕ್ಷಗಳ ಉದ್ದೇಶ ದೇಶದ ಜನರ ಪ್ರಾಣವನ್ನ ಕಾಪಾಡುವುದು ಆಗಿರಬೇಕು. ಈ ವಿಚಾರದಲ್ಲಿ ನೀವು ಒಗ್ಗಟ್ಟು ಪ್ರದರ್ಶಿಸದಿದ್ರೆ ಇದಕ್ಕಿಂತ ಕೆಟ್ಟ ಪರಿಸ್ಥಿತಿ ಎದುರಾಗಬಹುದು ಅಂತ ಎಚ್ಚರಿಸಿದ್ದಾರೆ.

ಜೊತೆಗೆ ಬೇರೆಯವರ ಕಡೆ ಬೊಟ್ಟು ಮಾಡಿ ತೋರಿಸುವ ಮೂಲಕ ಸಮಯ ವ್ಯರ್ಥ ಮಾಡಬಾರದು ಅಂತ ಪರೋಕ್ಷವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ. ಇದುವರೆಗೆ ಅಮೆರಿಕ ನೀಡಿದ ಬೆಂಬಲಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಅವರು ಮುಂದೆಯೂ ಅಮೆರಿಕ ಹಣಕಾಸಿನ ನೆರವು ನೀಡಲಿದೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply