ಕೊರೋನಾ ಶಂಕೆ ಇದ್ರೆ ಪರೀಕ್ಷಿಸಿಕೊಳ್ಳಬೇಕು…ಪಾಪ ಈ ಮಹಿಳೆ ಕಥೆ ನೋಡಿ

masthmagaa.com:

ಅಮೆರಿಕ: ದೇಶದಲ್ಲಿ ಕೊರೋನಾ ವೈರಸ್ ಹಾವಳಿ ಮಿತಿ ಮೀರಿದೆ. ಹೀಗಾಗಿ ಕೋಲ್ಡ್, ಕಫ, ಜ್ವರ ಬಂದು ಏನಾದ್ರು ಗೊಂದಲ ಉಂಟಾದ್ರೆ ಕೂಡಲೇ ಹೋಗಿ ವೈದ್ಯರ ಬಳಿ ತಪಾಸಣೆ ನಡೆಸಿಕೊಳ್ಳಿ.. ವೈದ್ಯರು ಕೊರೋನಾ ಪರೀಕ್ಷೆ ಬೇಡ ಎನ್ನಬಹುದು. ಆದ್ರೆ ನಿಮಗೆ ಗೊಂದಲ ಇದ್ರೆ ಹಠ ಹಿಡಿದು ಪರೀಕ್ಷೆ ನಡೆಸಿಕೊಳ್ಳಿ.. ಯಾಕಂದ್ರೆ ಅಮೆರಿಕಾದಲ್ಲಿ ಇದೇ ರೀತಿ ಒಂದು ಘಟನೆ ವರದಿಯಾಗಿದೆ.

ಇಲ್ಲಿ 39 ವರ್ಷದ ಮಹಿಳೆ ನತಾಶಾ ಎಂಬುವವರು ಎಚ್​​ಐವಿ ರೋಗಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. 2 ವಾರಗಳ ಹಿಂದೆ ಅವರಿಗೆ ಕೋಲ್ಡ್ ಆಗಿತ್ತು. ಹೀಗಾಗಿ ವೈದ್ಯರ ಬಳಿ ತೆರಳಿ ಕೊರೋನಾ ಪರೀಕ್ಷೆ ನಡೆಸುವಂತೆ ಮನವಿ ಮಾಡಿದ್ದಳು. ಆದ್ರೆ ವೈದ್ಯರು ಇದು ಸಾಮಾನ್ಯ ಜ್ವರ ಅಷ್ಟೆ. ಇದಕ್ಕೆಲ್ಲಾ ಕೊರೋನಾ ಪರೀಕ್ಷೆ ಬೇಡ ಎಂದು ಹೇಳಿ ಮನೆಗೆ ಕಳುಹಿಸಿದ್ದಾರೆ. ಆದ್ರೆ ಕೆಲ ದಿನಗಳ ಬಳಿಕ ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಪುನಃ ವೈದ್ಯರ ಬಳಿ ತೆರಳಿದಾಗ ಕೊರೋನಾ ಪರೀಕ್ಷೆ ನಡೆಸಲಾಯ್ತು. ಆದ್ರೆ ಪರೀಕ್ಷೆಯ ವರದಿ ಬರುವ ಮುನ್ನವೇ ನತಾಶಾ ಸಾವನ್ನಪ್ಪಿದ್ದಾರೆ. ಒಂದು ವೇಳೆ ಮೊದಲೇ ಕೊರೋನಾ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಿದ್ದರೆ ನತಾಶಾ ಜೀವ ಉಳಿಯುತ್ತಿತ್ತೇನೋ… ಆದ್ರೆ ವೈದ್ಯರ ನಿರ್ಲಕ್ಷ್ಯದಿಂದ ನತಾಶಾ ಜೀವ ಬಿಟ್ಟಿದ್ದಾರೆ.

-masthmagaa.com

Contact Us for Advertisement

Leave a Reply