ಕೊರೋನಾ: ಭಾರತಕ್ಕೆ 7,500 ಕೋಟಿ ರೂ. ನೆರವು ಘೋಷಿಸಿದ ವಿಶ್ವಸಂಸ್ಥೆ

masthmagaa.com:

ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ 1 ಬಿಲಿಯನ್ ಡಾಲರ್ ತುರ್ತು ಹಣಕಾಸಿನ ನೆರವು ನೀಡಲು ವಿಶ್ವಬ್ಯಾಂಕ್ ಅನುಮೋದನೆ  ನೀಡಿದೆ. ಮೊದಲ ಹಂತದಲ್ಲಿ 25 ರಾಷ್ಟ್ರಗಳಿಗೆ 1.9 ಬಿಲಿಯನ್ ಡಾಲರ್ ಮೊತ್ತದ ಹಣಕಾಸಿನ ನೆರವು ನೀಡಿರುವ ವಿಶ್ವಬ್ಯಾಂಕ್, 2ನೇ ಹಂತದಲ್ಲಿ 40 ದೇಶಗಳಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ. ಅಲ್ಲದೆ ಇದರಲ್ಲಿ ದೊಡ್ಡ ಮೊತ್ತ ಭಾರತಕ್ಕೆ ಲಭಿಸುತ್ತಿದ್ದು, ಇದರಿಂದ ಭಾರತದಲ್ಲಿ ಸ್ಕ್ರೀನಿಂಗ್, ಸೋಂಕಿತರ ಪತ್ತೆ, ಕೊರೋನಾ ಪರೀಕ್ಷೆ, ವೈದ್ಯರಿಗೆ ರಕ್ಷಣಾ ಸಾಮಗ್ರಿ ಖರೀದಿ ಮತ್ತು ಐಸೋಲೇಷನ್ ವಾರ್ಡ್​ ನಿರ್ಮಾಣಕ್ಕೆ ಸಹಾಯವಾಗುತ್ತೆ ಅಂತ ವಿಶ್ವಬ್ಯಾಂಕ್ ಹೇಳಿದೆ.

ಭಾರತದ ಜೊತೆಗೆ ಪಾಕಿಸ್ತಾನಕ್ಕೆ 200 ಮಿಲಿಯನ್, ಆಫ್ಘಾನಿಸ್ತಾನಕ್ಕೆ 100 ಮಿಲಿಯನ್, ಶ್ರೀಲಂಕಾಕ್ಕೆ 128.6 ಮಿಲಿಯನ್ ಮತ್ತು ಮಾಲ್ಡೀವ್ಸ್‌ಗೆ 37.3 ಮಿಲಿಯನ್ ಡಾಲರ್‌ನಂತೆ ಹಣಕಾಸು ನೆರವು ಘೋಷಿಸಿದೆ. ಇನ್ನು ವಿಶ್ವಕ್ಕೆ ಮಾರಕವಾಗಿರುವ ಕೊರೋನಾ ವಿರುದ್ಧ ಹೋರಾಡುತ್ತಿರುವ ದೇಶಗಳ ಅರ್ಥಿಕ ಪರಿಸ್ಥಿತಿ ಸುಧಾರಿಸಲು ಮುಂದಿನ 15 ತಿಂಗಳ ಕಾಲ 160 ಬಿಲಿಯನ್ ಡಾಲರ್​​​​​​ವರೆಗೆ ಅನುದಾನ ನೀಡೋದಾಗಿ ವಿಶ್ವಸಂಸ್ಥೆ ಘೋಷಿಸಿದೆ.

-masthmagaa.com

Contact Us for Advertisement

Leave a Reply