ಜಾಗತಿಕ ಶಿಕ್ಷಣ ತುರ್ತುಪರಿಸ್ಥಿತಿ: 46.30 ಕೋಟಿ ಮಕ್ಕಳು ಆನ್​ಲೈನ್​ ಶಿಕ್ಷಣದಿಂದ ವಂಚಿತ..!

masthmagaa.com:

ಕೊರೋನಾ ಹಾವಳಿ ಹಿನ್ನೆಲೆ ಬಹುತೇಕ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಆನ್​ಲೈನ್ ತರಗತಿಯ ಮೊರೆ ಹೋಗಿವೆ. ಆದ್ರೆ ಜಗತ್ತಿನಾದ್ಯಂತ 46.30 ಕೋಟಿ ವಿದ್ಯಾರ್ಥಿಗಳ ಬಳಿ ಆನ್​ಲೈನ್ ಕ್ಲಾಸ್​ಗೆ ಬೇಕಾದ ಉಪಕರಣ ಮತ್ತು ಇಂಟರ್ನೆಟ್ ಇಲ್ಲ ಅಂತ ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ತನ್ನ ವರದಿಯಲ್ಲಿ ತಿಳಿಸಿದೆ.

ಸುಮಾರು 100 ದೇಶಗಳಿಂದ ಅಂಕಿ ಅಂಶಗಳನ್ನ ಪಡೆದು ಈ ವರದಿಯನ್ನ ಪ್ರಕಟಿಸಲಾಗಿದೆ. ಅದರಲ್ಲೂ ದಕ್ಷಿಣ ಏಷ್ಯಾ, ಆಫ್ರಿಕಾ, ಪೆಸಿಫಿಕ್ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ ಅಂತ ವರದಿಯಲ್ಲಿ ತಿಳಿಸಿದೆ. ಜೊತೆಗೆ ಇದು ಜಾಗತಿಕ ಶಿಕ್ಷಣ ತುರ್ತುಪರಿಸ್ಥಿತಿ ಅಂತ ಹೇಳಿದೆ.

ಭಾರತದಲ್ಲಿ ಆನ್​ಲೈನ್​ ತರಗತಿ ಬಗ್ಗೆ ಪರ, ವಿರೋಧದ ಚರ್ಚೆಗಳು ನಡೆಯುತ್ತಿರುವಾಗಲೇ ಈ ವರದಿ ಪ್ರಕಟವಾಗಿದೆ. ದೇಶ ಮತ್ತು ರಾಜ್ಯದಲ್ಲಿ ಕೆಲವೊಂದು ಶೈಕ್ಷಣಿಕ ಸಂಸ್ಥೆಗಳು ಆನ್​ಲೈನ್ ಕ್ಲಾಸ್​ನ ಮೊರೆ ಹೋದ್ರೆ. ಇನ್ನೂ ಕೆಲ ಶೈಕ್ಷಣಿಕ ಸಂಸ್ಥೆಗಳು ಗೊಂದಲಕ್ಕೆ ಸಿಲುಕಿವೆ. ಸರ್ಕಾರಿ ಶಾಲೆಗಳ ಮತ್ತು ಗ್ರಾಮೀಣ ಭಾಗದ ಬಡ ಮಕ್ಕಳಂತೂ ಮೊಬೈಲ್​ ಇಲ್ಲದೆ, ಇಂಟರ್ನೆಟ್​​ ಇಲ್ಲದೆ ಆನ್​ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ.

-masthmagaa.com

Contact Us for Advertisement

Leave a Reply