ಯಾರ ಒತ್ತಾಡವೂ ಬೇಕಿಲ್ಲ, ಪರಿಹಾರ ತರೋದ್ ಗೊತ್ತಿದೆ: ಯಡಿಯೂರಪ್ಪ

ಮೈಸೂರು: ಪರಿಹಾರದ ವಿಚಾರದಲ್ಲಿ ಯಾರೂ ಗೊಂದಲ ಉಂಟು ಮಾಡೋದು ಬೇಡ ಅಂತ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪರಿಹಾರದ ವಿಚಾರದಲ್ಲಿ ಯಾವ ಪಕ್ಷದ ಒತ್ತಡವೂ ಬೇಕಾಗಿಲ್ಲ. ಯಾವ ಪಕ್ಷದವರೂ ದೆಹಲಿಗೆ ಹೋಗುವ ಅಗತ್ಯವಿಲ್ಲ. ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಈಗಾಗಲೇ ಅಮಿತ್ ಶಾ ಅವರಿಗೆ ನಾನು ಎಲ್ಲವನ್ನೂ ಮನವರಿಕೆ ಮಾಡಿದ್ದೇನೆ. ಶೀಘ್ರದಲ್ಲೇ ಕೇಂದ್ರದಿಂದ ಪರಿಹಾರ ಬಿಡುಗಡೆಯಾಗಲಿದೆ ಅಂತ ಹೇಳಿದ್ರು. ಅಲ್ಲದೆ ಪರಿಹಾರದ ವಿಚಾರವಾಗಿ ಪಕ್ಷಗಳು ಗೊಂದಲ ಉಂಟು ಮಾಡಬಾರದು ಅಂತ ಕಿಡಿಕಾರಿದ್ರು. ಜೊತೆಗೆ ರಾಜ್ಯದ ಜನತೆಗೆ ಗಾಂಧಿ ಜಯಂತಿಯ ಶುಭಾಶಯ ಕೋರಿದ್ರು.

ಈ ಮಧ್ಯೆ ಪ್ರವಾಹದಲ್ಲಿ ಉಂಟಾದ ಹಾನಿ ಸಂಬಂಧ ವರದಿಯನ್ನು ಸಿದ್ಧಪಡಿಸಿರೋ ಕಾಂಗ್ರೆಸ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲ್ಲಿಸಲಿದೆ.

Contact Us for Advertisement

Leave a Reply