ವಲಸಿಗರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಹೊಡೆದು ಕೊಂದೇ ಬಿಟ್ರು..!

masthmagaa.com:

ಇಡೀ ದೇಶದಲ್ಲಿ ಲಾಕ್​ಡೌನ್ ಹೇರಲಾಗಿದ್ದು ಸಂಚಾರವನ್ನ ನಿರ್ಬಂಧಿಸಲಾಗಿದೆ. ಯಾರು ಎಲ್ಲಿದ್ದೀರೋ ಅಲ್ಲೇ ಇರುವಂತೆ ಜನರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ ಕೆಲವರು ತಮ್ಮ ತಮ್ಮ ಊರುಗಳತ್ತ ನಡೆದುಕೊಂಡೇ ಹೋಗ್ತಿದ್ದಾರೆ. ಹೀಗೆ ಬೇರೆ ರಾಜ್ಯದಿಂದ ಬಂದವರ ಬಗ್ಗೆ ಕೊರೋನಾ ಹೆಲ್ಪ್​ ಸೆಂಟರ್​ಗೆ ಮಾಹಿತಿ ನೀಡಿದ ಯುವಕನನ್ನು ಹೊಡೆದು ಸಾಯಿಸಲಾಗಿದೆ. ಈ ಶಾಕಿಂಗ್ ಘಟನೆ ನಡೆದಿರೋದು ಬಿಹಾರದ ಮಧೌಲ್ ಎಂಬ ಗ್ರಾಮದಲ್ಲಿ.

ಮಹಾರಾಷ್ಟ್ರದಿಂದ ಗ್ರಾಮಕ್ಕೆ ಬಂದ ಇಬ್ಬರ ಬಗ್ಗೆ ಯುವಕನೊಬ್ಬ ಕೊರೋನಾ ಸಹಾಯ ಕೇಂದ್ರಕ್ಕೆ ಮಾಹಿತಿ ನೀಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಇಬ್ಬರ ಕುಟುಂಬಸ್ಥರು ಯುವಕನನ್ನು ಹೊಡೆದು ಸಾಯಿಸಿದ್ದಾರೆ. ಈ ಸಂಬಂಧ ಪೊಲೀಸರು 7 ಜನರನ್ನು ಅರೆಸ್ಟ್ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿ ಕೊರೋನಾ ಶಂಕೆ ಹಿನ್ನೆಲೆ ಅಧಿಕಾರಿಗಳಿಗೆ ಮಾಹಿತಿ ನೀಡಿ ತನ್ನ ಕರ್ತವ್ಯ ಪೂರೈಸಿದ್ದಾನೆ. ಅವನನ್ನು ಕೊಲೆ ಮಾಡಿರೋರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಬಿಹಾರ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply