masthmagaa.com:

ಬೆಂಗಳೂರಿನಲ್ಲಿ ಕಾಲೇಜುಗಳು ಆರಂಭವಾದ 5 ದಿನದಲ್ಲಿ 117 ವಿದ್ಯಾರ್ಥಿಗಳು ಮತ್ತು 51 ಉಪನ್ಯಾಸಕರಿಗೆ ಕೊರೋನಾ ಪಾಸಿಟಿವ್ ಬಂದಿದೆ ಅಂತ ಬಿಬಿಎಂಪಿ ತಿಳಿಸಿದೆ. ನವೆಂಬರ್ 17ರಿಂದ ನವೆಂಬರ್ 21ರವರೆಗೆ ಕಾಲೇಜುಗಳಲ್ಲಿ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ಇದು ಗೊತ್ತಾಗಿದೆ. ಹಲವರ ವರದಿ ಇನ್ನೂ ಬರಬೇಕಿದ್ದು, ಅದರಲ್ಲಿ ಇನ್ನೆಷ್ಟು ಜನರಿಗೆ ಪಾಸಿಟಿವ್ ಬರುತ್ತೋ ಎಂಬ ಆತಂಕ ಮೂಡಿದೆ.

ಅಂದ್ಹಾಗೆ ರಾಜ್ಯದಲ್ಲಿ ಕೊರೋನಾ ಹಾವಳಿ ಸ್ವಲ್ಪ ಕಮ್ಮಿಯಾದ ಹಿನ್ನೆಲೆ ಸ್ನಾತಕೋತ್ತರ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್ 17ರಿಂದ ಭೌತಿಕ ತರಗತಿಗಳನ್ನ ಆರಂಭಿಸಲಾಗಿತ್ತು. ಉಳಿದವರಿಗೆ ಆನ್​ಲೈನ್ ಕ್ಲಾಸ್​ ಮುಂದುವರಿಸಲಾಗಿತ್ತು. ಆದ್ರೀಗ ಕಾಲೇಜು ಆರಂಭವಾದ ಐದೇ ದಿನದಲ್ಲಿ ಒಟ್ಟು 168 ಜನರಿಗೆ ಸೋಂಕು ತಗುಲಿರೋದು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಅವರ ಕುಟುಂಬಸ್ಥರ ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ.

-masthmagaa.com

 

Contact Us for Advertisement

Leave a Reply