ಹೊರ ರಾಜ್ಯದಿಂದ ಬರುವವರಿಗೆ 14 ದಿನ ಕಡ್ಡಾಯ ಸರ್ಕಾರಿ ಕ್ವಾರಂಟೈನ್..!

masthmagaa.com:

ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಎಲ್ಲಾ ಪ್ರಯಾಣಿಕರನ್ನು 14 ದಿನಗಳ ಕಾಲ ಕಡ್ಡಾಯ ಸರ್ಕಾರಿ ಕ್ವಾರಂಟೈನ್​ನಲ್ಲಿ ಇಡಲಾಗುವುದು ಅಂತ ರಾಜ್ಯ ಸರ್ಕಾರ ಹೇಳಿದೆ. ಉಚಿತ ಕ್ವಾರಂಟೈನ್​ ಸೇವೆ ಪಡೆಯಲು ಇಚ್ಛಿಸುವವರು ನಿಗದಿತ ಸರ್ಕಾರಿ ಹಾಸ್ಟೆಲ್​ಗಳಲ್ಲಿ ಉಳಿದುಕೊಳ್ಳಬಹುದು. ಹೋಟೆಲ್​ನಲ್ಲಿ ಕ್ವಾರಂಟೈನ್​ಗೆ ಒಳಪಡಲು ಇಚ್ಛಿಸುವವರು ಅದರ ಖರ್ಚು ವೆಚ್ಚವನ್ನು ತಾವೇ ನೋಡಿಕೊಳ್ಳಬೇಕು. ಈ 14 ದಿನಗಳ ಒಳಗೆ ನಿಮ್ಮ ಮನೆಗಳಿಗೆ ಹೋಗಲು ಬಿಡುವುದಿಲ್ಲ ಅಂತ ರಾಜ್ಯ ಸರ್ಕಾರ ತಿಳಿಸಿದೆ.

ನಿನ್ನೆಯಷ್ಟೇ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲಿನಲ್ಲಿ ಬಂದ ಕೆಲವರು 14 ದಿನಗಳ ಕಡ್ಡಾಯ ಸರ್ಕಾರಿ ಕ್ವಾರಂಟೈನ್​ಗೆ ಒಳಪಡಲು ನಿರಾಕರಿಸಿದ್ರು. ಈ ಹಿನ್ನೆಲೆ 25 ಜನರನ್ನು ವಾಪಸ್ ದೆಹಲಿಗೆ ಕಳಿಸಲಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ರಾಜ್ಯ ಆರೋಗ್ಯ ಇಲಾಖೆ, ‘ರಾಜ್ಯದ ರಕ್ಷಣೆ ಮುಖ್ಯ’ ಅಂತ ಹೇಳಿತ್ತು.

ಆದ್ರೆ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ರಾಜ್ಯಕ್ಕೆ ಬಂದ ನಂತರ ನಡೆಸುವ RT-PCR ಟೆಸ್ಟ್​ನಲ್ಲಿ ನೆಗೆಟಿವ್ ಬಂದರೆ  ಕಡ್ಡಾಯ ಸರ್ಕಾರಿ ಕ್ವಾರಂಟೈನ್​ನಿಂದ ವಿನಾಯಿತಿ ನೀಡಲಾಗುತ್ತದೆ. ಇಂಥವರು 14 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್​ಗೆ ಒಳಪಡಲು ಅವಕಾಶವಿದೆ.

ಕಳೆದ ಹಲವು ದಿನಗಳಿಂದ ಶ್ರಮಿಕ್ ವಿಶೇಷ ರೈಲಿನಲ್ಲಿ ಸಾವಿರಾರು ವಲಸೆ ಕಾರ್ಮಿಕರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೆ ಸಾಮಾನ್ಯ ನಾಗರಿಕರಿಗೆ ಕೆಲವೊಂದು ವಿಶೇಷ ರೈಲುಗಳನ್ನ ಬಿಡಲಾಗಿದೆ. ಈ ಹಿನ್ನೆಲೆ ಹೊರ ರಾಜ್ಯಗಳಿಂದ ಆಗಮಿಸುವವರು 14 ದಿನಗಳ ಕಡ್ಡಾಯ ಸರ್ಕಾರಿ ಕ್ವಾರಂಟೈನ್​ನಲ್ಲಿ ಇರಬೇಕಿದೆ.

-masthmagaa.com

Contact Us for Advertisement

Leave a Reply