masthmagaa.com:

ಗಡಿ ನುಸುಳಿ ಉಗ್ರರು ಭಾರತೀಯ ಭೂಪ್ರದೇಶ ಪ್ರವೇಶಿಸೋದನ್ನ ನೋಡಿದ್ದೀವಿ, ಕೇಳಿದ್ದೀವಿ. ಆದ್ರೆ ಇಂದು ಬೆಳಗ್ಗೆ ಪಾಕ್ ಆಕ್ರಮಿತ ಕಾಶ್ಮೀರದಿಂದ (PoK) ಇಬ್ಬರು ಯುವತಿಯರು ಜಮ್ಮು-ಕಾಶ್ಮೀರದ ಪೂಂಚ್​ನಲ್ಲಿ ಭಾರತೀಯ ಭೂಪ್ರದೇಶವನ್ನ ಪ್ರವೇಶಿಸಿದ್ದಾರೆ ಅಂತ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಯುವತಿಯರು ಭಾರತೀಯ ಭೂಪ್ರದೇಶಕ್ಕೆ ಬರೋದನ್ನ ನಮ್ಮ ಸೇನೆ ನೋಡಿದ್ದು, ಯುವತಿಯರಿಗೆ ಯಾವುದೇ ಹಾನಿಯಾಗದಂತೆ ಸಂಯಮ ಕಾಯ್ದಕೊಂಡಿದೆ. ಜೊತೆಗೆ ಇಬ್ಬರನ್ನ ವಾಪಸ್ ಕಳಿಸಲು ತಯಾರಿ ನಡೆಯುತ್ತಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಯುವತಿಯರು ಮಿಸ್ ಆಗಿ ಗಡಿ ದಾಟಿ ಬಂದಿದ್ದಾರೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇರಲಿಲ್ಲ ಅಂತ ಸೇನೆ ಹೇಳಿದೆ.

-masthmagaa.com

Contact Us for Advertisement

Leave a Reply