ಬೆಂಗಳೂರಲ್ಲಿ ಗುಣಮುಖಳಾದ ಮಹಿಳೆಗೆ ಮತ್ತೆ ಕೊರೋನಾ: ದೇಶದಲ್ಲೇ ಮೊದಲ ಪ್ರಕರಣ

masthmagaa.com:

ಕೊರೋನಾ ಬಂದು ಗುಣಮುಖರಾದವರಿಗೆ ಮತ್ತೆ ಸೋಂಕು ತಗುಲುತ್ತಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. ಇತ್ತೀಚೆಗೆ ಹಾಂಗ್​ಕಾಂಗ್ ಸೇರಿದಂತೆ ಕೆಲ ದೇಶಗಳಲ್ಲಿ ಇಂತಹ ಪ್ರಕರಣಗಳು ದೃಢಪಟ್ಟಿದ್ದವು. ಇದೀಗ ನಮ್ಮ ಬೆಂಗಳೂರಿನಲ್ಲೇ ಇಂತಹ ಪ್ರಕರಣ ದೃಡಪಟ್ಟಿದೆ.

ಅಂದ್ಹಾಗೆ ಬೆಂಗಳೂರಿನಲ್ಲಿ 27 ವರ್ಷದ ಮಹಿಳೆಗೆ ಜುಲೈ ತಿಂಗಳಿನಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಬಳಿಕ ನೆಗೆಟಿವ್ ಬಂದ ಹಿನ್ನೆಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರು. ಅದಾಗಿ ಒಂದು ತಿಂಗಳಲ್ಲಿ ಅವರಿಗೆ ಸಣ್ಣ ಪ್ರಮಾಣದ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು. ಇದೀಗ ಅವರಿಗೆ  ಮತ್ತೆ ಸೋಂಕು ದೃಢಪಟ್ಟಿದೆ ಅಂತ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ತಿಳಿಸಿದೆ. ಭಾರತದಲ್ಲಿ ಗುಣಮುಖರಾದವರಿಗೆ ಸೋಂಕು ತಗುಲಿದ ಮೊದಲ ಅಧಿಕೃತ ಪ್ರಕರಣ ಇದಾಗಿದೆ.

ಇದರ ಅರ್ಥ ಮೊದಲ ಸಲ ಸೋಂಕು ತಗುಲಿದವರ ದೇಹದಲ್ಲಿ ರೂಪುಗೊಂಡಿದ್ದ ವೈರಾಣು ವಿರುದ್ಧದ ಪ್ರತಿಕಾಯಗಳು ಹೆಚ್ಚು ದಿನ ಉಳಿಯಲ್ಲ ಅನ್ನೋದು ಈ ಪ್ರಕರಣದಿಂದ ದೃಢಪಟ್ಟಿದೆ. ಇದರ ಪರಿಣಾಮ ಕೊರೋನಾ  ಸೋಂಕು ತಗುಲಿ ಗುಣಮುಖರಾದವರಿಗೆ ಮತ್ತೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಜೊತೆಗೆ ಕೊರೋನಾಗೆ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಕೂಡ ಹೆಚ್ಚು ದಿನ ಕೆಲಸ ಮಾಡಲ್ವಾ..? ಅನ್ನೋ ಅನುಮಾನ ಮೂಡುವಂತಾಗಿದೆ.

-masthmagaa.com

Contact Us for Advertisement

Leave a Reply