masthmagaa.com:

ಜಮ್ಮು-ಕಾಶ್ಮೀರದ ಧ್ವಜ ಸಿಗುವವರೆಗೆ ತ್ರಿವರ್ಣ ಧ್ವಜವನ್ನೂ ಕೂಡ ಹಾರಿಸಲ್ಲ ಅಂತ ಒಂದ್​ರೀತಿ ದೇಶದ್ರೋಹದ ಹೇಳಿಕೆ ನೀಡಿದ್ದ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್​ ಪಾರ್ಟಿಗೆ (PDP) ಮೂವರು ನಾಯಕರು ರಾಜೀನಾಮೆ ನೀಡಿದ್ದಾರೆ. ಟಿ.ಎಸ್​. ಬಜ್ವಾ, ವೇದ್ ಮಹಾಜನ್ ಮತ್ತು ಹುಸೇನ್ ಎ. ವಫ್ಫಾ ಗುಡ್​ಬೈ ಹೇಳಿದ್ದಾರೆ. ಮೆಹಬೂಬಾ ಮುಫ್ತಿಗೆ ನೀಡಿರುವ ರಾಜೀನಾಮೆ ಪತ್ರದಲ್ಲಿ, ‘ನಿಮ್ಮ ಕೆಲವೊಂದು ಹೇಳಿಕೆಗಳು ದೇಶಭಕ್ತಿಯ ಭಾವನೆಗಳಿಗೆ ನೋವುಂಟು ಮಾಡಿವೆ’ ಅಂತ ಉಲ್ಲೇಖಿಸಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ವೇದ್​ ಮಹಾಜನ್, ‘ನಮ್ಮ ರಾಷ್ಟ್ರಧ್ವಜ ನಮ್ಮ ಹೆಮ್ಮೆ. ಆದ್ರೆ ಮುಫ್ತಿಯವರ ಹೇಳಿಕೆಯಿಂದ ನಮಗೆ ನೋವಾಗಿದೆ. ನಾವು ಜಾತ್ಯತೀತರು ಅಂತ ಇವತ್ತು ಜಮ್ಮು-ಕಾಶ್ಮೀರದ ಜನತೆಗೆ ತೋರಿಸಿದ್ದೀವಿ. ಪಿಡಿಪಿ ಬಿಟ್ಟು ಬರಲು ಇನ್ನಷ್ಟು ನಾಯಕರು, ಕಾರ್ಯಕರ್ತರು ಕಾಯುತ್ತಿದ್ದಾರೆ’ ಅಂತ ಹೇಳಿದ್ದಾರೆ.

ಹುಸೇನ್ ಎ. ವಫ್ಪಾ ಮಾತನಾಡಿ, ‘ದೇಶ ಮತ್ತು ದೇಶದ ಬಾವುಟ ಮೊದಲು. ಆಮೇಲೆ ರಾಜ್ಯ ಮತ್ತು ರಾಜಕೀಯ ಪಕ್ಷಗಳ ಬಾವುಟ ಬರುತ್ತದೆ. ರಾಷ್ಟ್ರಧ್ವಜ ನಮ್ಮ ಗುರುತು’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply