ಅಸ್ಸಾಂನಲ್ಲಿ ಒಂದೇ ಬಾರಿಗೆ 30 ಸಾವಿರ ಶಿಕ್ಷಕರ ನೇಮಕಾತಿ!

masthmagaa.com:

ಅಸ್ಸಾಂ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಸರ್ಕಾರ ಹಲವು ಗಿಫ್ಟ್​​ಗಳನ್ನು ನೀಡ್ತಾ ಇದೆ. ಅದೇ ರೀತಿ ಕಾರ್ಯಕ್ರಮವೊಂದರಲ್ಲಿ ಸಿಎಂ ಸರ್ಬಾನಂದ ಸೊನೋವಾಲ್ 30 ಸಾವಿರ ಮಂದಿ ಸ್ಕೂಲ್ ಮತ್ತು ಕಾಲೇಜು ಶಿಕ್ಷಕರಿಗೆ ಅಪಾಯಿಂಟ್​ಮೆಂಟ್​ ಲೆಟರ್​​ಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಒಂದೇ ಬಾರಿಗೆ ಈ ಪ್ರಮಾಣದಲ್ಲಿ ಶಿಕ್ಷಕರ ನೇಮಕ ಇದೇ ಮೊದಲಾಗಿದೆ. ಈ ಮೂಲಕ ನಾವು ನಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ ಅಂತ ಸಿಎಂ ಸರ್ಬಾನಂದ ಸೊನೋವಾಲ್ ಟ್ವೀಟ್ ಮಾಡಿದ್ದಾರೆ.

ನಿನ್ನೆಯಷ್ಟೇ ಇಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಸ್ಸಾಂ ಚಾಯ್ ಬಗೀಚಾ ಧನ್ ಪುರಸ್ಕಾರ್ ಸ್ಕೀಮ್ ಘೋಷಿಸಿದ್ರು. 3 ವರ್ಷಗಳ ಯೋಜನೆ ಇದಾಗಿದ್ದು, 7.46 ಲಕ್ಷ ಮಂದಿ ಚಹಾ ತೋಟದ ಕಾರ್ಮಿಕರಿಗೆ ಇದರಿಂದ ಲಾಭವಾಗಲಿದೆ. ಅವರ ಖಾತೆಗಳಿಗೆ 3 ಸಾವಿರ ರೂಪಾಯಿ ದುಡ್ಡು ಬೀಳಲಿದೆ.

-masthmagaa.com

Contact Us for Advertisement

Leave a Reply