ಭಾರತದಲ್ಲಿ ಕೊರೋನಾ: 300 ಗಡಿ ದಾಟಿದ ಸಾವಿನ ಸಂಖ್ಯೆ..10 ಸಾವಿರದತ್ತ ಸೋಂಕಿತರ ಸಂಖ್ಯೆ..!

masthmagaa.com:

ದೆಹಲಿ: ದೇಶದಲ್ಲಿ ಲಾಕ್​ಡೌನ್ 20ನೇ ದಿನಕ್ಕೆ ಕಾಲಿಟ್ಟರೂ ಕೊರೋನಾ ವೈರಸ್ ಹಾವಳಿ ಕಡಿಮೆಯಾಗಿಲ್ಲ. ಕಳೆದ 24 ಗಂಟೆಯಲ್ಲಿ 35 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 308ಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ 9,152 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಈ ನಡುವೆ ಇಂದಿನಿಂದ ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರ ಸಚಿವರುಗಳ ಕಚೇರಿಗಳಲ್ಲಿ ಇಂದಿನಿಂದ ಕೆಲಸ ಪುನಾರಂಭವಾಗಲಿದೆ.

ಇನ್ನು 2ನೇ ಹಂತದ ಲಾಕ್​ಡೌನ್​ನಲ್ಲಿ ದೇಶವನ್ನು ಕೆಂಪು, ಕಿತ್ತಳೆ, ಹಳದಿ ವಲಯಗಳನ್ನಾಗಿ ವರ್ಗೀಕರಿಸಲು ನಿರ್ಧರಿಸಲಾಗಿದೆ.  ಈ ಮೂಲಕ ದೇಶದ ಅರ್ಧದಷ್ಟು ಭಾಗದಲ್ಲಿ ಕೆಂಪು ಮತ್ತು ಕೇಸರಿ ಬಣ್ಣ ಇರಲಿದೆ. ದೇಶದ 364  ಜಿಲ್ಲೆಗಳು ಕೊರೋನಾದಿಂದ ಬಳಲುತ್ತಿವೆ. ಈ ಸಂಖ್ಯೆ ಮಾರ್ಚ್​ 29ರಂದು 160 ಇತ್ತು. ಅದೇ ರೀತಿ ಏಪ್ರಿಲ್ 6ರಂದು 284 ಇತ್ತು ಅಂತ ತಿಳಿದು ಬಂದಿದೆ.

ಇನ್ನು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,985ರ ಗಡಿ ದಾಟಿದೆ. ಇನ್ನು ದೆಹಲಿಯಲ್ಲಿ 1,154, ತಮಿಳುನಾಡಿನಲ್ಲಿ 1,075 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

-masthmagaa.com

Contact Us for Advertisement

Leave a Reply