ದೇಶದಲ್ಲಿ ಮತ್ತೆ 3 ಸಾವಿರ ಜನರಿಗೆ ಸೋಂಕು.. 95 ಜನ ಸಾವು..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,320 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, 95 ಮಂದಿ ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59,662ಕ್ಕೆ ಏರಿಕೆಯಾಗಿದೆ. ಇದರಲ್ಲಿ 1981 ಜನ ಮೃತಪಟ್ಟಿದ್ದು, 17847 ಜನ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿರುವ ಆ್ಯಕ್ಟಿವ್ ಪ್ರಕರಣಗಳ ಸಂಖ್ಯೆ 39,834 ಆಗಿದೆ.

ಕೊರೋನಾ ಪೀಡಿತ ಟಾಪ್-5 ರಾಜ್ಯಗಳು:

1. ಮಹಾರಾಷ್ಟ್ರ: 19,063 (731 ಸಾವು)

2. ಗುಜರಾತ್: 7,402 (449 ಸಾವು)

3. ದೆಹಲಿ: 6,318 (68 ಸಾವು)

4. ತಮಿಳುನಾಡು: 6,009 (40 ಸಾವು)

5. ರಾಜಸ್ಥಾನ: 3,579 (101 ಸಾವು)

-masthmagaa.com

Contact Us for Advertisement

Leave a Reply