ಚಿಕ್ಕಬಳ್ಳಾಪುರದಲ್ಲಿ ಮತ್ತೆ 5 ಜನರಿಗೆ ಕೊರೋನಾ.. ಸೋಂಕಿತರ ಸಂಖ್ಯೆ 75

masthmagaa.com:

ಕೊರೋನಾ ವೈರಸ್​ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವೃದ್ಧೆ ಬಲಿಯಾಗಿ, ಮೂವರು ಆಸ್ಪತ್ರೆ ಸೇರಿರುವಾಗಲೇ ಸೋಂಕಿತರ ಸಂಪರ್ಕಕ್ಕೆ ಬಂದ ಮತ್ತೆ ಐವರಲ್ಲಿ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಈ ಮೂಲಕ ಗೌರಿಬಿದನೂರಿನಲ್ಲಿ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಈ ವಿಚಾರವನ್ನ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಸ್ಪಷ್ಟಪಡಿಸಿದ್ದಾರೆ.

ಮೆಕ್ಕಾ ಯಾತ್ರೆ ಮುಗಿಸಿ ಮಾರ್ಚ್ ಎರಡನೇ ವಾರದಲ್ಲಿ ವಾಪಾಸಾಗಿದ್ದ ಗೌರಿಬಿದನೂರು ನಗರದ ನಾಲ್ಕು ಯಾತ್ರಿಕರಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು. ಈ ಪೈಕಿ ವೃದ್ಧೆಯೊಬ್ಬರು ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈಗ ಮೃತ ಮಹಿಳೆಯ ಮಗ, ಸೊಸೆ, ಮೊಮ್ಮಗ ಸೇರಿದಂತೆ ಸೊಸೆಯ ತಮ್ಮನಿಗೂ ಕೊರೋನಾ ಸೋಂಕು ಪಾಸಿಟಿವ್ ಬಂದಿದೆ‌. ಅಲ್ಲದೆ ಗೌರಿಬಿದನೂರಿನಲ್ಲಿ ದೃಢಪಟ್ಟ ಮೊದಲ ಪ್ರಕರಣದ 31 ವರ್ಷದ ವ್ಯಕ್ತಿಯ ತಂದೆಗೂ ಸೋಂಕು ದೃಢಪಟ್ಟಿದೆ. ಹೀಗಾಗಿ ಈ ಮೊದಲ 4 ಪ್ರಕರಣಗಳ ಜೊತೆಗೆ ಇಂದು ಹೊಸದಾಗಿ 5 ಪ್ರಕರಣಗಳು ಸೇರಿ ಒಟ್ಟು 9 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ.

ಅಲ್ಲದೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ ಅಂತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply