ದೇಶದಲ್ಲಿ ಒಂದೇ ದಿನ 5 ಸಾವಿರ ಜನರಿಗೆ ಸೋಂಕು.. 157 ಮಂದಿ ಸಾವು..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 5,242‬ ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಒಂದೇ ದಿನದಲ್ಲಿ ಇಷ್ಟು ಜನರಿಗೆ ಕಾಯಿಲೆ ಹರಡಿರೋದು ದೇಶದಲ್ಲಿ ಇದೇ ಮೊದಲು. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 96,169ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 157 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದುವರೆಗೆ 3,029 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. 36,824 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ದೇಶದ ವಿವಿಧ ಆಸ್ಪತ್ರೆಗಳಲ್ಲಿ 56,316‬ ಮಂದಿ ಕಾಯಿಲೆ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ದೇಶದಲ್ಲಿರುವ ಆ್ಯಕ್ಟಿವ್ ಪ್ರಕರಣಗಳಾಗಿವೆ.

ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 33 ಸಾವಿರ ದಾಟಿದ್ದು, ಒಂದೇ ರಾಜ್ಯದಲ್ಲಿ 1,198 ಜನ ಮೃತಪಟ್ಟಿದ್ದಾರೆ. ಗುಜರಾತ್​ ಹಾಗೂ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 11 ಸಾವಿರ ಗಡಿ ದಾಟಿದೆ. ದೆಹಲಿಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಕಾಯಿಲೆ ಹರಡಿದೆ.

-masthmagaa.com

Contact Us for Advertisement

Leave a Reply