masthmagaa.com:

ಬೆಂಗಳೂರಿನಲ್ಲಿ ಕಾಲೇಜುಗಳು ಆರಂಭವಾದ ಬಳಿಕ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಪೈಕಿ ಒಟ್ಟು 57 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ ಅಂತ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಕಾಲೇಜು ಆರಂಭವಾದ ಬಳಿಕ 11 ಸಾವಿರ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದೆ. ಇದರಲ್ಲಿ 7,000 ಪರೀಕ್ಷೆಗಳ ವರದಿ ಬಂದಿದ್ದು 57 ಜನರಿಗೆ ಪಾಸಿಟಿವ್ ಬಂದಿದೆ ಅಂತ ಅವರು ತಿಳಿಸಿದ್ದಾರೆ. ಅಂದ್ಹಾಗೆ ರಾಜ್ಯದಲ್ಲಿ ಕೊರೋನಾ ಹಾವಳಿ ಸ್ವಲ್ಪ ಕಮ್ಮಿಯಾದ ಹಿನ್ನೆಲೆ ಸ್ನಾತಕೋತ್ತರ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್ 17ರಿಂದ ಭೌತಿಕ ತರಗತಿಗಳನ್ನ ಆರಂಭಿಸಲಾಗಿತ್ತು. ಉಳಿದವರಿಗೆ ಆನ್​ಲೈನ್ ಕ್ಲಾಸ್​ ಮುಂದುವರಿಸಲಾಗಿತ್ತು. ಆದ್ರೀಗ ಕಾಲೇಜು ಆರಂಭವಾದ ಮೂರೇ ದಿನದಲ್ಲಿ 57 ಜನರಿಗೆ ಸೋಂಕು ತಗುಲಿರೋದು ಆತಂಕ ಮೂಡಿಸಿದೆ. ಕೊರೋನಾ ಅನ್ಕೊಂಡು ಈಗಾಗಲೇ ವಿದ್ಯಾರ್ಥಿಗಳು ಕಾಲೇಜಿಗೆ ಬರ್ತಿಲ್ಲ. ಇನ್ನು ಕ್ಲಾಸ್ ಅಟೆಂಡ್​ ಮಾಡಿದವರಿಗೆ ಸೋಂಕು ತಗುಲಿದೆ ಅನ್ನೋ ವಿಚಾರ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಅವರ ಕುಟುಂಬಸ್ಥರ ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ.

-masthmagaa.com

Contact Us for Advertisement

Leave a Reply