14 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮ ನೀಡಿದ ವೃದ್ಧೆ..!

masthmagaa.com:

ಬಿಹಾರ: ವೃದ್ಧೆಯೊಬ್ಬರು 14 ತಿಂಗಳಲ್ಲಿ 8 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಯ್ಯೋ ದೇವ್ರೆ ಇದ್ಹೇಗೆ ಸಾಧ್ಯ ಅಂತ ತಲೆ ಕೆಡಿಸಿಕೊಳ್ಳಬೇಡಿ.. ಇದು ಕೇವಲ ಸರ್ಕಾರದ ಪ್ರೋತ್ಸಾಹ ಧನವನ್ನು ಹೊಡೆಯಲು ಮಾಡಿದ ಒಂದು ಕುತಂತ್ರ ಅಷ್ಟೆ.. ಹೌದು.. ಹೆಣ್ಣು ಮಕ್ಕಳು ಜನಿಸಿದ್ರೆ ಸರ್ಕಾರದ ನ್ಯಾಷನಲ್ ಹೆಲ್ತ್ ಮಿಷನ್  ಕಡೆಯಿಂದ ತಾಯಂದಿರಿಗೆ ಒಂದಷ್ಟು ಪ್ರೋತ್ಸಾಹ ಧನ ಸಿಗುತ್ತೆ.. ಇದನ್ನೇ ಬಂಡವಾಳ ಮಾಡಿಕೊಂಡ ಬಿಹಾರದ ಮುಜಾಫರ್​ಪುರದ 65 ವರ್ಷದ ವೃದ್ಧೆ ಲೀಲಾದೇವಿ ಎಂಬುವವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರೋತ್ಸಾಹ ಧನವನ್ನು ಹೊಡೆದಿದ್ದಾರೆ. ವಿಪರ್ಯಾಸ ಅಂದ್ರೆ ನ್ಯಾಷನಲ್ ಹೆಲ್ತ್ ಮಿಷನ್ ಅಧಿಕಾರಿಗಳು ಮತ್ತು ಬ್ಯಾಂಕ್ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸದೇ ಈ ವೃದ್ಧ ಮಹಿಳೆಗೆ ಪ್ರೋತ್ಸಾಹಧನವನ್ನು ನೀಡಿದ್ದಾರೆ.

ಲೀಲಾದೇವಿ ಮಾತ್ರವಲ್ಲ.. ಇದೇ ರೀತಿ ಶಾಂತಿದೇವಿ ಎಂಬುವವರು 9 ತಿಂಗಳಲ್ಲಿ 5 ಮಕ್ಕಳಿಗೆ ಜನ್ಮ ನೀಡಿದ್ರೆ, ಸೋನಿಯಾ ದೇವಿ ಎಂಬುವವರು 5 ತಿಂಗಳಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ..

ಆದ್ರೆ ಈ ಬಗ್ಗೆ ಮಹಿಳೆಯರನ್ನು ಕೇಳಿದ್ರೆ ನಾವು ಮಕ್ಕಳಿಗೆ ಜನ್ಮ ನೀಡಿ ಹಲವಾರು ವರ್ಷಗಳೇ ಉರುಳಿ ಹೋಗಿವೆ.. ಇದೆಲ್ಲಾ ಸುಳ್ಳು ಎಂದಿದ್ದಾರೆ.. ಹೀಗಾಗಿ ಅಧಿಕಾರಿಗಳೇ ಈ ರೀತಿ ನಕಲಿ ದಾಖಲೆ ಸೃಷ್ಟಿಸಿ ದುಡ್ಡು ಹೊಡೆದ್ರಾ..? ಅಥವಾ ಮಹಿಳೆಯರೇ ದುಡ್ಡು ಹೊಡೆದು ಈಗ ಸುಳ್ಳು ಹೇಳ್ತಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ.. ಹೀಗಾಗಿ ಜಿಲ್ಲಾ ನ್ಯಾಯಾಲಯ ತನಿಖೆಗೆ ಆದೇಶಿಸಿದ್ದು, ತನಿಖೆ ಬಳಿಕ ಸತ್ಯ ಹೊರಬೀಳಲಿದೆ.

-masthmagaa.com

Contact Us for Advertisement

Leave a Reply