masthmagaa.com:

ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಹಾಸ್ಯನಟಿ ಮತ್ತು ‘ದಿ ಕಪಿಲ್ ಶರ್ಮಾ ಶೋ’ ಖ್ಯಾತಿಯ ಭಾರ್ತಿ ಸಿಂಗ್ ಅರೆಸ್ಟ್ ಆದ ಬೆನ್ನಲ್ಲೇ ಆಕೆಯ ಪತಿ ಹಾರ್ಷ್​ ಲಿಂಬಾಚಿಯಾ ಕೂಡ ಅರೆಸ್ಟ್ ಆಗಿದ್ದಾರೆ. ಭಾರ್ತಿ ಸಿಂಗ್ ಅವರನ್ನ ಶನಿವಾರ ಬಂಧಿಸಿದ್ದ ಎನ್​ಸಿಬಿ ಅಧಿಕಾರಿಗಳು ಹಾರ್ಷ್​ ಲಿಂಬಾಚಿಯಾ ಅವರನ್ನ ಇಡೀ ರಾತ್ರಿ ವಿಚಾರಣೆ ನಡೆಸಿ ಭಾನುವಾರ ಬೆಳಗ್ಗೆ ಅರೆಸ್ಟ್ ಮಾಡಿದ್ದಾರೆ. ಬರೋಬ್ಬರಿ 15 ಗಂಟೆಗಳ ವಿಚಾರಣೆ ಬಳಿಕ ಅವರ ಬಂಧನವಾಗಿದೆ. ಗಂಡ-ಹೆಂಡತಿ ಇಬ್ಬರು ಕೂಡ ಗಾಂಜಾ ಸೇವನೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರಿಗೂ ವೈದ್ಯಕೀಯ ತಪಾಸಣೆ ನಡೆಸಲಾಗ್ತಿದ್ದು, ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ಅಂದ್ಹಾಗೆ ಭಾರ್ತಿ ಸಿಂಗ್ ಅವರ ಪ್ರೊಡಕ್ಷನ್ ಆಫೀಸ್ ಮತ್ತು ಮನೆ ಮೇಲೆ ಶನಿವಾರ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 86.5 ಗ್ರಾಂನಷ್ಟು ಗಾಂಜಾ ಸಿಕ್ಕಿತ್ತು. ಈ ಹಿನ್ನೆಲೆ ಇಬ್ಬರನ್ನು ವಶಕ್ಕೆ ಪಡೆದಿದ್ದ ಅಧಿಕಾರಿಗಳು ವಿಚಾರಣೆ ನಡೆಸಿ ಬಂಧಿಸಿದ್ಧಾರೆ.

-masthmagaa.com

Contact Us for Advertisement

Leave a Reply