masthmagaa.com:

ಭಾರತದಲ್ಲಿ ಇದುವರೆಗೆ 1 ಕೋಟಿಗೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿದೆಯಲಾ ಇದರಲ್ಲಿ ಪುರುಷರೇ ಹೆಚ್ಚಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕೊರೋನಾ ಪಾಸಿಟಿವ್ ಬಂದವರಲ್ಲಿ 63% ಪುರುಷರಿದ್ದಾರೆ. ಅದೇ ರೀತಿ 37% ಮಹಿಳೆಯರಿದ್ದಾರೆ. ಇನ್ನು ಏಜ್​-ವೈಸ್​ ಯಾರಿಗೆ ಹೆಚ್ಚು ಕೊರೋನಾ ಸೋಂಕು ತಗುಲಿದೆ ಅಂತ ನೋಡೋದಾದ್ರೆ.. 26ರಿಂದ 44 ವರ್ಷ ವಯಸ್ಸಿನವರಿಗೆ ಹೆಚ್ಚು ಕೊರೋನಾ ಪಾಸಿಟಿವ್ ಬಂದಿದೆ. ಅದು ಬಿಟ್ರೆ 45ರಿಂದ 60 ವರ್ಷದವರು ಇದ್ದಾರೆ. ಕೊರೋನಾ ದೃಢಪಟ್ಟವರಲ್ಲಿ ಯಾವ ವಯಸ್ಸಿನವರು ಎಷ್ಟು ಪರ್ಸೆಂಟ್​ ಜನರಿದ್ದಾರೆ ಅನ್ನೋದು ಇಲ್ಲಿದೆ ನೋಡಿ,

  • 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರು 8%
  • 18-25 ವರ್ಷ ವಯಸ್ಸಿನವರು 13%
  • 26-44 ವರ್ಷ ವಯಸ್ಸಿನವರು 39%
  • 45-60 ವರ್ಷ ವಯಸ್ಸಿನವರು 26%
  • 60 ವರ್ಷ ಮೇಲ್ಪಟ್ಟರು 14%

-masthmagaa.com

Contact Us for Advertisement

Leave a Reply